ರಸ್ತೆ ಗುಂಡಿಗಳಲ್ಲಿ ಭತ್ತ ನಾಟಿ ಮಾಡಿ ಪ್ರತಿಭಟನೆ

ಕೊಳ್ಳೇಗಾಲ ಪಟ್ಟಣದ ಐಬಿ ವೃತ್ತದ ಗುಂಡಿಗಳಿಗೆ ಮಣ್ಣು ಸುರಿದು ಭತ್ತದ ಪೈರು ನಾಟಿ ಮಾಡಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟಿಸಿದರು. ಆಯಾಜ್, ರಾಜೇಶ್ವರಿ, ನಿಸಾರ್, ಅಹಮ್ಮದ್, ಜೆ.ಲಿಂಗರಾಜು, ರಾಮಕೃಷ್ಣ, ಸ್ವಾಮಿ ಇತರರಿದ್ದರು.
ಕೊಳ್ಳೇಗಾಲ ಪಟ್ಟಣದ ಐಬಿ ವೃತ್ತದ ಗುಂಡಿಗಳಿಗೆ ಮಣ್ಣು ಸುರಿದು ಭತ್ತದ ಪೈರು ನಾಟಿ ಮಾಡಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟಿಸಿದರು. ಆಯಾಜ್, ರಾಜೇಶ್ವರಿ, ನಿಸಾರ್, ಅಹಮ್ಮದ್, ಜೆ.ಲಿಂಗರಾಜು, ರಾಮಕೃಷ್ಣ, ಸ್ವಾಮಿ ಇತರರಿದ್ದರು.
Published on
ಕೊಳ್ಳೇಗಾಲ: ಪಟ್ಟಣದ ವ್ಯಾಪ್ತಿಯ ರಸ್ತೆಗಳಲ್ಲಿ ನಿರ್ಮಾಣವಾಗಿರುವ ಗುಂಡಿಗಳು ಮುಚ್ಚಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ತಾಲೂಕು ಪದಾಧಿಕಾರಿಗಳು ಗುರುವಾರ ಐಬಿ ವೃತ್ತದ ಗುಂಡಿಗಳಲ್ಲಿ ಭತ್ತದ ಪೈರು ನಾಟಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರು, ನಗರಸಭೆ ಪೌರಾಯುಕ್ತರು ಹಾಗೂ ರಸ್ತೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಮೊಳಗಿಸಿದ ಪ್ರತಿಭಟನಾಕಾರರು ಗುಂಡಿಗಳಿಗೆ ಮಣ್ಣು ಸುರಿದು ನೀರು ಹಾಕಿದರು. ಬಳಿಕ ಭತ್ತದ ಪೈರು ನಾಟಿ ಮಾಡಿ ಆಕ್ರೋಶ ಹೊರಹಾಕಿದರು.
ಕರವೇ ತಾಲೂಕು ಘಟಕ ಅಧ್ಯಕ್ಷ ಆಯಾಜ್ ಮಾತನಾಡಿ, ಕೊಳ್ಳೇಗಾಲ ಪಟ್ಟಣ ಮುಖ್ಯ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಜನರು ಜೀವ ಭಯದಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಡಿಬಿದ್ದ ರಸ್ತೆಗಳಲ್ಲಿ ಹಾಲಿ ಶಾಸಕರು, ಮಾಜಿ ಶಾಸಕರು, ಅಧಿಕಾರಿಗಳು ಸಂಚರಿಸುತ್ತಾರೆ. ಆದರೆ ಗುಂಡಿಗಳನ್ನು ಮುಚ್ಚಿಸುವ ಪ್ರಯತ್ನ ಮಾತ್ರ ಮಾಡಿಲ್ಲ. ಗುಂಡಿಗಳಿಂದ ಅಪಘಾತ ಸಂಭವಿಸಿ ಪ್ರಾಣ ಹಾನಿ ಆಗುವವರೆಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉತ್ತಮವಾದ ಕೆಲಸ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಲಿ. ಅವರ ಅಧಿಕಾರವನ್ನು ಹೋರಾಟಗಾರರಿಗೆ ಕೊಡಲಿ. ನಾವು ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇವೆ. ಮುಂದಿನ ದಿನಗಳಲ್ಲಿ ರಸ್ತೆಗಳು ಅಭಿವೃದ್ಧಿಯಾಗದಿದ್ದರೆ ಶಾಸಕರ ಭಾವಚಿತ್ರಕ್ಕೆ ರಸ್ತೆಯಲ್ಲಿ ಮಸಿ ಬಳಿದು ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪೌರಾಯುಕ್ತರಿಗೆ ಮನವಿ
ಪ್ರತಿಭಟನೆ ಬಳಿಕ ಹೋರಾಟಗಾರರು ನಗರಸಭೆ ಪೌರಾಯುಕ್ತೆ ರುದ್ರಮ್ಮ ಶರಣಯ್ಯ ಅವರಿಗೆ ಪಟ್ಟಣದ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರವೇ ಗೌರವಾಧ್ಯಕ್ಷ ನಿಸಾರ್ ಅಹಮ್ಮದ್, ಲಿಂಗರಾಜು, ಇಂದ್ರಿಸ್ ಪಾಷ, ಮಹದೇವ ಪ್ರಸಾದ್, ಮೂರ್ತಿ, ಇರ್ಷಾನ್‌ಖಾನ್, ಶಶಿ, ಮುಹಿನ್ದಿನ್, ಮುಬಾರಕ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರಾಜೇಶ್ವರಿ, ಸುರೇಶ್, ನವೀನ್ ಮಧುಸೂದನ್, ಸಾಗರ್, ಸುಂದರ್‌ಶಾಸ್ತ್ರಿ, ರೈತ ಮುಖಂಡ ರಾಮೃಕೃಷ್ಣ, ಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net