ಗುಂಡ್ಲುಪೇಟೆ: ತಾಲೂಕಿನಲ್ಲಿ ವ್ಯಾಪಿಸುತ್ತಿರುವ ಟಿಪ್ಪರ್‌ಗಳ ಹಾವಳಿ ತಡೆಯುವಂತೆ ಒತ್ತಾಯಿಸಿ ಹಿಂದೂ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿ ಮುಂದೆ ಸಮಾವೇಶಗೊಂಡ ಕಾರ್ಯಕರ್ತರು ಟಿಪ್ಪರ್ ಚಾಲಕರು ಮದ್ಯಪಾನ ಮಾಡಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಪ್ರತಿದಿನವೂ ಒಂದಲ್ಲ ಒಂದು ಕಡೆ ಅಪಘಾತಕ್ಕೆ ಕಾರಣವಾಗುತ್ತಿದ್ದಾರೆ. ಟಿಪ್ಪರ್ ಹಾವಳಿ ಬಗ್ಗೆ ಸಾಮಾಜಿಕ ಜಾಲತಾಣ ಸೇರಿ ಎಲ್ಲ ಕಡೆಗಳಲ್ಲೂ ಚರ್ಚೆಯಾಗುತ್ತಿದ್ದು, ಗ್ರಾಮಾಂತರ ಪ್ರದೇಶಗಳ ರಸ್ತೆಗಳೆಲ್ಲ ಸಂಪೂರ್ಣ ಹಾಳಾಗಿವೆ. ಆದ್ದರಿಂದ ಕೂಡಲೇ ಟಿಪ್ಪರ್‌ಗಳ ಹಾವಳಿ ತಡೆಗಟ್ಟಬೇಕು ಎಂದು ತಹಸೀಲ್ದಾರ್ ಎಂ.ಎಸ್.ತನ್ಮಯಿ ಅವರನ್ನು ಒತ್ತಾಯಿಸಿದರು.
ಸಂಘಟನೆಯ ಕಾರ್ಯಕಾರ್ತರಾದ ಪ್ರಣಯ್, ಮಂಜು, ಸುನೀಲ್ ಮೂಡ್ಲು, ಡಾ.ನವೀನ್ ಮೌರ್ಯ, ನಾಗೇಂದ್ರ, ರಾಜಪ್ಪ, ಪುರಸಭೆ ಮಾಜಿ ಅಧ್ಯಕ್ಷ ಸುರೇಶ್, ಮಾಜಿ ಸದಸ್ಯ ನಾಗೇಶ್, ಮಹದೇವಸ್ವಾಮಿ, ನಾಗೇಂದ್ರ ಇತರರು ಇದ್ದರು.