ರೌಡಿ ಶೀಟರ್‌ಗನ್ನು ಗಡಿಪಾರು ಮಾಡಲು ಆಗ್ರಹ

ವಕೀಲರೊಬ್ಬರ ಕೊಲೆ ಯತ್ನ ಮಾಡಿದ ರೌಡಿ ಶೀಟರ್‌ಗನ್ನು ಗಡಿಪಾರು ಮಾಡಲು ಆಗ್ರಹಿಸಿ   ಗುಂಡ್ಲುಪೇಟೆಯಲ್ಲಿ ವಕೀಲರು ಬುಧವಾರ ಕಲಾಪದಿಂದ ಹೊರಗುಳಿದು ಪ್ರತಿಭಟಿಸಿದರು.
ವಕೀಲರೊಬ್ಬರ ಕೊಲೆ ಯತ್ನ ಮಾಡಿದ ರೌಡಿ ಶೀಟರ್‌ಗನ್ನು ಗಡಿಪಾರು ಮಾಡಲು ಆಗ್ರಹಿಸಿ ಗುಂಡ್ಲುಪೇಟೆಯಲ್ಲಿ ವಕೀಲರು ಬುಧವಾರ ಕಲಾಪದಿಂದ ಹೊರಗುಳಿದು ಪ್ರತಿಭಟಿಸಿದರು.
Published on
ಗುಂಡ್ಲುಪೇಟೆ : ಸ್ಥಳೀಯ ವಕೀಲರೊಬ್ಬರ ಕೊಲೆ ಯತ್ನ ನಡೆಸಿದ ರೌಡಿ ಶೀಟರ್‌ಗಳಿಬ್ಬರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ವಕೀಲರು ಬುಧವಾರ ಕಲಾಪದಿಂದ ಹೊರಗುಳಿದು ಪ್ರತಿಭಟಿಸಿದರು.
ಗುಂಡ್ಲುಪೇಟೆ ನ್ಯಾಯಾಲಯ ಸಂಕೀರ್ಣದ ಮುಂದೆ ಸಮಾವೇಶಗೊಂಡ
ವಕೀಲರು, ಸೆ.9 ರಂದು ವಕೀಲ ಡಿ.ರವಿ ಪಟ್ಟಣದ ತೋಟದ ಬೀದಿಯಲ್ಲಿ ಸ್ನೇಹಿತರೊಂದಿಗೆ ಮಾತಾಡುತ್ತ ನಿಂತಿದ್ದಾಗ ವ್ಯಕ್ತಿಯೊಬ್ಬರು ಅಜಾರೂಕವಾಗಿ ಕಾರು ಚಾಲನೆ ಮಾಡಿದ್ದನ್ನು ಪ್ರಶ್ನಿಸಿದರು.
ಈ ವೇಳೆ ದುರ್ವರ್ತನೆ ತೋರಿದ ರೌಡಿಶೀಟರ್, ಕೆಲ ಸಮಯದಲ್ಲಿ ತನ್ನ ಸ್ನೇಹಿತ ಮಣಿಯೊಂದಿಗೆ ಸ್ಥಳಕ್ಕೆ ಬಂದು ಲಾಂಗ್ ಬೀಸುವ ಮೂಲಕ ರವಿ ಅವರ ಕೊಲೆ ಯತ್ನ ನಡೆಸಿದ್ದಾರೆ. ಈ ಬಗ್ಗೆ ವಕೀಲರು ದೂರು ನೀಡಿದ್ದು, ಜಾಮೀನಿನ ಕಲಂಗಳನ್ನು ಮಾತ್ರ ಹಾಕಲಾಗಿದೆ.
ಕೊಲೆ ಯತ್ನ ಮಾಡಿರುವ ಇಬ್ಬರು ಆರೋಪಿಗಳನ್ನು ಗಡಿಪಾರು ಮಾಡಬೇಕು ಎಂದು ವಕೀಲರು ಒತ್ತಾಯಿಸಿದರು. ವಕೀಲರಾದ ಜಿ.ಎಸ್.ಮಧುಸೂದನ್, ಎಚ್.ಬಿ.ಮೂರ್ತಿ, ಎಸ್.ಎನ್.ನಂದೀಶ್, ಬಿ.ಎನ್.ಸಿದ್ದರಾಜು, ಪುಟ್ಟಸ್ವಾಮಿ, ಗಿರೀಶ್, ನಾಗರಾಜು, ಸಂತೋಷ್, ರಾಜೇಶ್‌ಹಂಗಳ, ಎಸ್.ರಾಜೇಶ್, ಸಿ.ಜಿ.ಕಾಂತರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net