ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮರವಾಡಿ ಗ್ರಾಮದ ಮಾದೇಶ ಮತ್ತು ಪತ್ನಿ ಲಕ್ಷ್ಮೀ, ಮಗಳು ಕಾವೇರಿಯಮ್ಮಾಳ್ ತೆರಕಣಾಂಬಿ ಹೋಬಳಿಯ ವೆಂಕಟೇಶ್ ಅವರ ತೋಟದ ಮನೆಯಲ್ಲಿ 11 ತಿಂಗಳಿಂದ ಕೂಲಿ ಕೆಲಸ ಮಾಡುತ್ತಿದ್ದರು. ತೋಟದ ಮಾಲೀಕ ವೆಂಕಟೇಶ್ ನಿಗದಿತ ಸಮಯಕ್ಕೆ ದುಡಿದ ಹಣ ನೀಡದೆ ಸತಾಯಿಸುವ ಜತೆಗೆ ಸ್ವಗ್ರಾಮಕ್ಕೆ ಕಳುಹಿಸದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ನ.6ರಂದು ಗುಂಡ್ಲುಪೇಟೆಯ ತಹಶೀಲ್ದಾರ್ ಎಂ.ಎಸ್.ತನ್ಮಯಿ, ತೆರಕಣಾಂಬಿ ನಾಡಕಚೇರಿಯ ಕಂದಾಯ ಅಧಿಕಾರಿ ನಾಗೇಂದ್ರ, ತೆರಕಣಾಂಬಿ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಕೆ.ಎಂ.ಮಹೇಶ್ ತೋಟದ ಮನೆಗೆ ಭೇಟಿ ನೀಡಿ ಕೃಷಿ ಕಾರ್ಮಿಕರನ್ನು ರಕ್ಷಿಸಿ ಜೀತ ವಿಮುಕ್ತಿ ಕಾಯ್ದೆಯಡಿ ಉಪವಿಭಾಗಾಧಿಕಾರಿ ಬಳಿ ಹಾಜರುಪಡಿಸಿ ವಿಚಾರಣೆ ನಡೆಸಿದರು.