ಪ್ರಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ

 ಚಾಮರಾಜನಗರ ತಾಲೂಕಿನ  ಹರವೆ ಗ್ರಾಮದ  ಶ್ರೀಚನ್ನಬಸವೇಶ್ವರ ವಿದ್ಯಾಸಂಸ್ಥೆಯ ಆವರಣದಲ್ಲಿ ರಾಜ್ಯ ಕಬ್ಬು ಬೆಳೆಗಾರರ  ಸಂಘದ ವತಿಯಿಂದ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡಲಾಯಿತು. ಡಿಸಿ ಶ್ರೀರೂಪಾ, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಹಾಲಿನ ನಾಗರಾಜು, ರಾಜಣ್ಣ, ಮಲೆಯೂರು ಮಹೇಂದ್ರ ಇತರರು ಹಾಜರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರೈತ ನಾಯಕ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೇಳಿಕೆ
  • , ಪ್ರಕೃತಿ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ
ಚಾಮರಾಜನಗರ: ತಾಲೂಕಿನ ಹರವೆ ಗ್ರಾಮದ ಶ್ರೀಚನ್ನಬಸವೇಶ್ವರ ವಿದ್ಯಾಸಂಸ್ಥೆಯ ಆವರಣದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ವಿದ್ಯಾಸಂಸ್ಥೆಯ ಆವರಣದಲ್ಲಿ ಗಿಡ ನೆಟ್ಟ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಪ್ರಕೃತಿ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಕೈಗಾರಿಕೆ ಮತ್ತು ನಗರೀಕರಣದಿಂದ ಪ್ರಕೃತಿಯ ನಾಶವಾಗುತ್ತಿದೆ. ಆಧುನಿಕ ಜಗತ್ತಿನ ಜೀವನಶೈಲಿ, ನೂತನ ಆವಿಷ್ಕಾರದಿಂದ ಪ್ರಕೃತಿ ಮತ್ತು ಪರಿಸರದ ಅವನತಿಯಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿ, ರೈತ ಸಂಘಟನೆಗಳು ಕೇವಲ ಹೋರಾಟಕ್ಕೆ ಸೀಮಿತವಾಗದೆ ಪ್ರಕೃತಿಯ ರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಣೆಯಲ್ಲಿ ಮುಂದಾಗಿರುವುದು, ಪರಿಸರ ಜಾಗೃತಿಗೆ ಚಾಲನೆ ನೀಡುತ್ತಿರುವುದು ಭವಿಷ್ಯದಲ್ಲಿ ಪರಿಸರ ರಕ್ಷಣೆಗೆ ಭೂನಾದಿ ಆಗಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಜಣ್ಣ, ಹಾಲಿನ ನಾಗರಾಜು, ಚನ್ನಬಸವೇಶ್ವರ ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿ ಗಿರೀಶ್, ಎಸಿಎಫ್ ಮಂಜುನಾಥ್, ಮಲೆಯೂರು ಮಹೇಂದ್ರ, ಸತೀಶ್, ಮಹೇಶ್, ಶ್ರೀಕಂಠ, ರಾಮಣ್ಣ, ಬಸವರಾಜು, ನಾಗರಾಜು, ಪುಟ್ಟಮಲ್ಲೇಗೌಡ, ರಾಜುಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net