ಸುರಕ್ಷತೆಗೆ ಪೂರಕ: ಬೆಟ್ಟಕ್ಕೆ ವಿವಿಧೆಡೆಯಿಂದ ಪ್ರತಿದಿನವೂ ಭಕ್ತರು ಭೇಟಿ ನೀಡುತ್ತಾರೆ. ಶಿವರಾತ್ರಿ, ಯುಗಾದಿ, ದೀಪಾವಳಿ, ಅಮಾವಾಸ್ಯೆಗಳಲ್ಲಿ ಭಕ್ತ ಸಾಗರವೇ ಹರಿದು ಬರಲಿದೆ. ಕೊಳ್ಳೇಗಾಲ ಮಾರ್ಗವಾಗಿ ಮೈಸೂರು, ಕೆ.ಆರ್.ಪೇಟೆ, ನಂಜನಗೂಡು, ಎಚ್.ಡಿ ಕೋಟೆ, ತಿ.ನರಸೀಪುರ ಇನ್ನಿತರ ಕಡೆಗಳಿಂದ ರಸ್ತೆ ಮೂಲಕ ಹಗಲು-ರಾತ್ರಿ ಪಾದಯಾತ್ರಿಗಳು ಸಹಸ್ರಾರು ಸಂಖ್ಯೆಯಲ್ಲಿ ತೆರಳುತ್ತಾರೆ. ಪಾದಯಾತ್ರಿಗಳಿಗೆ ರಾತ್ರಿ ಸಂಚಾರ ಸುರಕ್ಷಿತವಾಗಿರುವುದಿಲ್ಲ. ಇತ್ತೀಚೆಗೆ ಚಿರತೆ ದಾಳಿಗೆ ಭಕ್ತನೊಬ್ಬ ಬಲಿಯಾಗಿದ್ದು ಭಕ್ತರಲ್ಲಿ ಆತಂಕ ಮೂಡಿಸಿದೆ. ಹಾಗಾಗಿ ಭಕ್ತರ ಸುರಕ್ಷತೆಗೆ ಡಾರ್ಮೆಟರಿ ಅನುಕೂಲವಾಗಲಿದೆ.