ಶ್ರೀ ಮದ್ದಾನೇಶ್ವರ ಶಾಲೆಗೆ ಬಹುಮಾನ

ಗುಂಡ್ಲುಪೇಟೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಹೋಬಳಿಮಟ್ಟದ ಕ್ರೀಡೆಯಲ್ಲಿ ಜಯಗಳಿಸಿದ ಮದ್ದಾನೇಶ್ವರ ಶಾಲೆ ವಿದ್ಯಾರ್ಥಿಗಳು ಹಾಗೂ ತರಬೇತುದಾರರಾದ ಸ್ವಾಮಿ, ಮಹೇಶ್, ಗೋಪಾಲಶೆಟ್ಟಿ ಇದ್ದರು.
ಗುಂಡ್ಲುಪೇಟೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಹೋಬಳಿಮಟ್ಟದ ಕ್ರೀಡೆಯಲ್ಲಿ ಜಯಗಳಿಸಿದ ಮದ್ದಾನೇಶ್ವರ ಶಾಲೆ ವಿದ್ಯಾರ್ಥಿಗಳು ಹಾಗೂ ತರಬೇತುದಾರರಾದ ಸ್ವಾಮಿ, ಮಹೇಶ್, ಗೋಪಾಲಶೆಟ್ಟಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುಂಡ್ಲುಪೇಟೆ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟ
ಗುಂಡ್ಲುಪೇಟೆ: ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ನಡೆದ ಕಸಬಾ ಹೋಬಳಿ ಮಟ್ಟದ 17 ವರ್ಷದೊಳಗಿನವರ ವಿಭಾಗದ ಕ್ರೀಡಾಕೂಟದಲ್ಲಿ ಪಟ್ಟಣದ ಶ್ರೀ ಮದ್ದಾನೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಪ್ರದರ್ಶಿಸಿ ತಾಲೂಕುಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
100 ಮೀಟರ್ ಓಟದಲ್ಲಿ ಯೋಗೇಶ್, ಗುಂಡು ಎಸೆತದಲ್ಲಿ ಮನೋಜ್ ಕುಮಾರ್, ಜಾವಲಿನ್ ಎಸೆತ ಗುರುಪ್ರಸಾದ್, 4/ 400 ಮೀಟರ್ ರಿಲೆ ಅಪೂರ್ವಾ ಮತ್ತು ತಂಡ, ಗುಂಪು ಸ್ಪರ್ಧೆಗಳಾದ ಬಾಲಕರ ಕಬಡ್ಡಿಯಲ್ಲಿ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳು, ಬಾಲಕರ ವಾಲಿಬಾಲ್‌ನಲ್ಲಿ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು, ಬಾಲಕಿಯರ ವಾಲಿಬಾಲ್ ಹಾಗೂ ಬಾಲಕಿಯರ ಖೋಖೋ ಪ್ರಥಮ ಸ್ಥಾನ ಪಡೆದಿದ್ದಾರೆ. 3000 ಮೀಟರ್ ಓಟದಲ್ಲಿ ಕೆಂಪಣ್ಣ, ಹೈ ಜಂಪ್‌ನಲ್ಲಿ ವಿನೋದ್, ಬಾಲಕರ ಕಬಡ್ಡಿಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ದ್ವಿತೀಯ ಸ್ಥಾನಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕರಾದ ಸ್ವಾಮಿ, ಮಹೇಶ್, ಗೋಪಾಲಶೆಟ್ಟಿ, ವಿದ್ಯಾಸಂಸ್ಥೆ ಅಧ್ಯಕ್ಷ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net