ಖಾಸಗಿ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಮನನೊಂದು ವಿಷ ಕುಡಿದು ಮಹೇಶ್ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು, ಗ್ರಾಮಸ್ಥರು ಕೊಳ್ಳೇಗಾಲದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮೃತನ ಕುಟುಂಬಸ್ಥರಿಂದ ಪ್ರತಿಭಟನೆ
ಸಂತ್ರಸ್ತನ ಕುಟುಂಬಕ್ಕೆ ಪರಿಹಾರ ನೀಡಲು ಪಟ್ಟು
ಕೊಳ್ಳೇಗಾಲ:
ಖಾಸಗಿ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಮನನೊಂದು ಕ್ರಿಮಿನಾಶಕ ಕುಡಿದು ಮಹೇಶ್ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆ ಪದಾಧಿಕಾರಿಗಳು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪಿವಿಎಸ್‌ಎಸ್ ಜಿಲ್ಲಾಧ್ಯಕ್ಷ ಮಹೇಶ್ ಕುಣಗಳ್ಳಿ ಮಾತನಾಡಿ, ಸಾಲ ಕೊಟ್ಟಿದ್ದ ಫೈನಾನ್ಸ್ ಸಿಬ್ಬಂದಿ ಮನೆ ಬಳಿ ಬಂದು ನಿಂದಿಸಿದ ಹಿನ್ನೆಲೆಯಲ್ಲಿ ಮಹೇಶ್ ಮನನೊಂದು ಸಿಬ್ಬಂದಿ ಎದುರೇ ಜು.28ರಂದು ವಿಷ ಕುಡಿದು ಅಸ್ವಸ್ಥನಾಗಿ ಮೈಸೂರು ಆಸ್ಪತ್ರೆಗೆ ದಾಖಲಾಗಿ ಆ.21ರಂದು ಮೃತಪಟ್ಟಿದ್ದಾರೆ. ಆದ್ದರಿಂದ ಸಂಕಷ್ಟದಲ್ಲಿರುವ ಮಹೇಶ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಮೃತನ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಫೈನಾನ್ಸ್ ಹೊರಬೇಕು ಎಂದು ಆಗ್ರಹಿಸಿದರು.
ಮೃತನ ಪತ್ನಿ ಶಾಂತಮ್ಮ, ಚಿಕ್ಕಪ್ಪ ಮರಿಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಮಲ್, ರೈತ ಸಂಘದ ಅಧ್ಯಕ್ಷ ಶೈಲೇಂದ್ರ, ತಾಲೂಕು ಅಧ್ಯಕ್ಷ ಮೋಳೆರಾಜು, ಪ್ರಧಾನ ಕಾರ್ಯದರ್ಶಿ ಪೆರಿಯಾನಾಯಗಂ, ಪಿವಿಎಸ್‌ಎಸ್ ಕಾರ್ಯಾಧ್ಯಕ್ಷ ಮಹದೇವ, ಹೋಬಳಿ ಅಧ್ಯಕ್ಷ ಗೋವಿಂದ ರಾಜು, ಕರವೇ(ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ಜಗದೀಶ್ ಶಾಸ್ತ್ರೀ, ಕರವೇ(ನಾರಾಯಣ ಗೌಡ ಬಣ)ಅಧ್ಯಕ್ಷ ಮೆಹಬೂಬ್ ಷರೀಫ್, ಯಜಮಾನರಾದ ಶ್ರೀನಿವಾಸಮೂರ್ತಿ, ಕುಮಾರ್, ಪುಟ್ಟಮ್ಮ, ರತ್ನಮ್ಮ, ಮಂಗಳಮ್ಮ ಇತರರು ಇದ್ದರು.