ಗ್ರಾಮಾಂತರ ಪ್ರದೇಶಗಳಿಗೆ ಮೂಲ ಸೌಕರ್ಯಕ್ಕೆ ಆದ್ಯತೆ

ಗುಂಡ್ಲುಪೇಟೆ: ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಈ ನಡುವೆ ಗ್ರಾಮಾಂತರ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ತಿಳಿಸಿದರು.
ಗುಂಡ್ಲುಪೇಟೆ: ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಈ ನಡುವೆ ಗ್ರಾಮಾಂತರ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ತಿಳಿಸಿದರು.
Published on
ಗುಂಡ್ಲುಪೇಟೆ: ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಈ ನಡುವೆ ಗ್ರಾಮಾಂತರ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ತಿಳಿಸಿದರು.
ಮುಖ್ಯಮಂತ್ರಿ ವಿಶೇಷ ಅನುದಾನದಡಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1.50 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿನ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕ್ಷೇತ್ರದಲ್ಲಿ ಶಾಸಕನಾಗಿ ಆಯ್ಕೆಯಾದ ನಂತರದ ದಿನಗಳಲ್ಲಿ ಪಕ್ಷಾತೀತವಾಗಿ ಕೆಲಸಗಳನ್ನ ಮಾಡಲಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಜನರ ಬೇಡಿಕೆಗಳನ್ನ ಈಡೇರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ತಜ್ಞರ ವರಧಿ ಆಧರಿಸಿ ಸಫಾರಿ ಆರಂಭ: ಕಳೆದ ಮೂರು ತಿಂಗಳವರೆಗೆ ನಿಷೇಧಿಸಿದ್ದ ಬಂಡೀಪುರದ ಸಫಾರಿಯನ್ನ ತಜ್ಞರ ವರದಿಯ ಆಧಾರದ ಮೇಲೆ ಕೆಲವು ನಿಬಂಧನೆಗಳೊಟ್ಟಿಗೆ ಮರು ಆರಂಭಗೊಳಿಸಲಾಗಿದೆ. ವರದಿಯಲ್ಲಿನ ಅಂಶದಂತೆ ಸಫಾರಿಯಿಂದಲೇ ವನ್ಯಜೀವಿಗಳು ಮಾನವ ವಾಸಸ್ಥಾನದ ಕಡೆಗೆ ಲಗ್ಗೆ ಇಡುತ್ತಿವೆ ಎಂಬುದಕ್ಕೆ ಸಕಾರಣಗಳಿಲ್ಲ, ಅರಣ್ಯದಲ್ಲಿ ಹುಲಿ, ಚಿರತೆಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಾಸ ಪ್ರದೇಶದ ಕೊರತೆಯಿಂದಾಗಿ ಹೊರಬಂದಿವೆ. ಆದರೂ ಅಗತ್ಯ ಕಟ್ಟೆಚ್ಚರಗಳೊಂದಿಗೆ ಸಫಾರಿ ಪ್ರಾರಂಭಿಸಲಾಗಿದೆ. ಸಫಾರಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕಾಡಂಚಿನ ಪ್ರದೇಶದ ಬಹುತೇಕ ಕುಟುಂಬಗಳು ಬಂದ್ ಆಗಿದ್ದ ಸಂಧರ್ಭದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದು ಸಂಕಷ್ಟಕ್ಕೆ ಸಿಲುಕಿದ್ದವು. ಇದನ್ನೆಲ್ಲಾ ಪರಿಗಣಿಸಿ ಹಿರಿಯ ನುರಿತ ಅಧಿಕಾರಿಗಳು ಹಾಗೂ ತಜ್ಞರ ವರದಿಯನ್ನಾದರಿಸಿ ಸಫಾರಿಗೆ ಚಾಲನೆ ನೀಡಲಾಗಿದೆ ಎಂದರು. ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ಮಹದೇವಸ್ವಾಮಿ ಬೆಟ್ಟದಮಾದಹಳ್ಳಿ, ಎಚ್.ಎನ್.ಬಸವರಾಜು ಸೇರಿದಂತೆ ಸ್ಥಳೀಯರು ಹಾಜರಿದ್ದರು.
ನಾನು ರೈತರ ಪರವಾಗಿಯೇ ಇದ್ದೇನೆ: ನಾವು ರೈತರ ವಿರೋಧಿಗಳಲ್ಲ ಈಗಲೂ ಮುಂದೆಯೂ ಸಹ ನಾನು ರೈತರ ಪರವಾಗಿಯೇ ಇದ್ದೇನೆ. ವನ್ಯಜೀವಿಗಳ ಹಾವಳಿ ತಪ್ಪಿಸಲು ಅವಶ್ಯಕವಾದ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅಧಿಕಾರಿಗಳ ಜತೆ ಸಭೆ ನಡೆಸಿ ರೈತರಿಗೆ ಮಾಹಿತಿ ನೀಡಲಾಗುವುದು. ಅರಣ್ಯ ಸಚಿವರು ಆದೇಶಿಸಿರುವಂತೆ ವನ್ಯಜೀವಿಗಳು ರೈತರ ಜಮೀನಿನ ಸುತ್ತಲೂ ಕಾಣಿಸಿಕೊಂಡ ಸಂದರ್ಭದಲ್ಲಿ ಮುಂಚಿತಾವಾಗಿಯೇ ಮಾಹಿತಿ ನೀಡಬೇಕು ಮತ್ತು ಸುರಕ್ಷತಾ ಕ್ರಮಕ್ಕೆ ಮುಂದಾಗಬೇಕು ಎಂದು ಸೂಚಿಸಿದ್ದಾರೆ. ಹಾಗಾಗಿ ರೈತರು ಕಂಗೆಡುವ ಅವಶ್ಯಕತೆಯಿಲ್ಲ ಎಂದು ಶಾಸಕ ಗಣೇಶ್ ಪ್ರಸಾದ್ ತಿಳಿಸಿದರು.
ಫೋಟೋ ಇದೆ
ಮುಖ್ಯಮಂತ್ರಿ ವಿಶೇಷ ಅನುದಾನದಡಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1.50 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಗುರುವಾರ ಭೂಮಿಪೂಜೆ ನೆರವೇರಿಸಿದರು. ನಂಜಂಡಪ್ರಸಾದ್, ಮಹದೇವಸ್ವಾಮಿ, ಎಚ್.ಎನ್.ಬಸವರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net