ಎಸ್.ಐ.ಆರ್ ವಿರೋಧಿ ಜಾಥಾಗೆ ಪೂರ್ವಭಾವಿ ಸಭೆ

ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾದ ಹಮ್ಮಿಕೊಂಡಿರುವ ಸಂಬಂಧ ಗುರುವಾರ ಪೂರ್ವಭಾವಿ ಸಭೆ ನಡೆಯಿತು. ಕೆ.ವೆಂಕಟರಾಜು, ಮಹಮ್ಮದ್ ಅಸ್ಗರ್(ಮುನ್ನ), ಅಬ್ರಾರ  ಅಹಮದ್, ಅಬ್ರಾಹಂ ಡಿ ಸಿಲ್ವ, ಕೆ.ಎಂ.ರೂಪೇಶ್, ಮಹೇಶ್ ಇದ್ದರು.
ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾದ ಹಮ್ಮಿಕೊಂಡಿರುವ ಸಂಬಂಧ ಗುರುವಾರ ಪೂರ್ವಭಾವಿ ಸಭೆ ನಡೆಯಿತು. ಕೆ.ವೆಂಕಟರಾಜು, ಮಹಮ್ಮದ್ ಅಸ್ಗರ್(ಮುನ್ನ), ಅಬ್ರಾರ ಅಹಮದ್, ಅಬ್ರಾಹಂ ಡಿ ಸಿಲ್ವ, ಕೆ.ಎಂ.ರೂಪೇಶ್, ಮಹೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರವಾಸಿ ಮಂದಿರದಲ್ಲಿ ಮುಖಂಡರ ಚರ್ಚೆ
  • ಜೂ.17ರಂದು ನಗರದಲ್ಲಿ ಜನ ಜಾಗೃತಿ ಜಾಥಾ
ಚಾಮರಾಜನಗರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ವಿರೋಧಿಸಿ ಜೂ.20ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವುದರ ಪ್ರಯುಕ್ತ ಜೂ.17ರಂದು ನಗರದಲ್ಲಿ ಜನ ಜಾಗೃತಿ ಜಾಥಾ ನಡೆಸಲು ಗುರುವಾರ ಪೂರ್ವ ಸಿದ್ಧತಾ ಸಭೆ ನಡೆಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಎಸ್‌ಐಆರ್ ವಿರೋಧಿ ಕರ್ನಾಟಕದ ಸಮಾನ ಮನಸ್ಕ ಮುಖಂಡರು ಮತ್ತು ವಿವಿಧ ರಾಜಕೀಯ ಪಕ್ಷಗಳು ಮುಖಂಡರು ಸಭೆಯಲ್ಲಿ ಪಾಲ್ಗೊಂಡರು. ಈ ವೇಳೆ ಹಿರಿಯ ಸಾಹಿತಿ ಕೆ.ವೆಂಕಟರಾಜು ಮಾತನಾಡಿ, ಎಸ್‌ಐಆರ್ ವಿರುದ್ಧ ಕರ್ನಾಟಕವಿದೆ ಎಂದು ತೋರಿಸಲು ಜೂ.20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ರಾಜ್ಯದ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಕೂಡ ಕೈಜೋಡಿಸಲಿದೆ. ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಮುಖಂಡರೂ ಭಾಗವಹಿಸಬೇಕೆಂದು ಕೋರಿದರು.
ಜೂ.20ರಂದು ಫ್ರೀಡಂ ಪಾರ್ಕ್‌ನದಲ್ಲಿ ನಡೆಯುವ ಪ್ರತಿಭಟನೆಗೆ ಮೊದಲು ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಸ್‌ಐಆರ್ ವಿರೋಧಿ ಜನ ಜಾಗೃತಿ ಜಾಥಾ ನಡೆಯಲಿದೆ. ಮೈಸೂರಿನಲ್ಲಿ ಜೂ.16ರಂದು ಜಾಥಾ ನಡೆದ ಬಳಿಕ ನಂಜನಗೂಡು ಮಾರ್ಗವಾಗಿ ಜೂ.17ರಂದು ಚಾಮರಾಜನಗರಕ್ಕೆ ಬರಲಿದೆ. ಜಾಥಾದಲ್ಲಿ ಬರುವ ವಾಹನದಲ್ಲಿ ಕಲಾವಿದರು ಸಾರ್ವಜನಿಕರಿಗೆ ಸಂದೇಶ ಸಾರಲಿದ್ದಾರೆ. ಈ ಸಂಬಂದ ಬೀದಿನಾಟಕವೂ ನಡೆಯಬಹುದು. ಜೂ.17ರಂದು ಚಾಮರಾಜನಗರದಲ್ಲಿ ನಡೆಯುವ ಜಾಥಾ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.
ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್(ಮುನ್ನ) ಮಾತನಾಡಿ, ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಪ್ರಚಾರ ನೀಡಲು ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಗಳ ಮುಖಂಡರೊಂದಿಗೆ ಮಾತನಾಡಿ ಒಟ್ಟುಗೂಡಿಸಬೇಕು. ಬಳಿಕ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸಿ ಜೂ.17ರಂದು ಚಾಮರಾಜನಗರಕ್ಕೆ ಜಾಥಾ ಆಗಮಿಸುತ್ತಿರುವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂದು ಸಲಹೆ ನೀಡಿದರು.
ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಅಹಮದ್ ಮಾತನಾಡಿ, ನಗರಕ್ಕೆ ಬರುವ ಜಾಥಾವನ್ನು ಮೈಸೂರು-ಚಾಮರಾಜನಗರ ಮುಖ್ಯರಸ್ತೆಯಲ್ಲಿ ಸ್ವಾಗತಿಸೋಣ. ಬಳಿಕ ಸಂತೇಮರಹಳ್ಳಿ ವೃತ್ತದಲ್ಲಿ ಕರಪತ್ರ ಹಂಚಿ, ಸಾರ್ವಜನಿಕರನ್ನುದ್ದೇಶಿಸಿ ಮುಖಂಡರಿಂದ ಮಾತನಾಡಿಸೋಣ. ಬಳಿಕ ನಗರದ ಪ್ರಮುಖ ವೃತ್ತಗಳಲ್ಲೂ ಭಾಷಣ ಕಾರ್ಯಕ್ರಮಗಳು ನಡೆಯಲಿ ಎಂದು ತಿಳಿಸಿದರು. ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಪರಿಗಣಿಸಿ ಜಾಥಾಗೆ ಸೂಕ್ತ ರೀತಿಯಲ್ಲಿ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲು ತೀರ್ಮಾನ ಮಾಡಲಾಯಿತು. ಮುಖಂಡರ ಅಬ್ರಾಹಂ ಡಿ ಸಿಲ್ವ, ಕೆ.ಎಂ.ರೂಪೇಶ್, ಮಹೇಶ್ಇ ದ್ದರು.
ಅರ್ಹರು ಹೊರಗುಳಿಯಬಾರದು:
ನನಗೆ ಇರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಶೇ.90ರಷ್ಟು ಮತದಾರರ ಮ್ಯಾಪಿಂಗ್ ಆಗಿದೆ. ಉಳಿದ ಮತದಾರರ ಮ್ಯಾಪಿಂಗ್ ಆಗಬೇಕಾಗಿದೆ. ಅರ್ಹ ಮತದಾರರು ಮತಪಟ್ಟಿಯಿಂದ ಹೊರಗೆ ಉಳಿಯಬಾರದು. ಎಸ್‌ಐಆರ್ ಅನ್ನು ತಡೆಯಲು ಸಾಧ್ಯವಿಲ್ಲ. ಆದರೆ ಸರಿಯಾದ ರೀತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಬೇಕಾಗಿದೆ ಎಂದು ಬಿಎಸ್ಪಿ ಮುಖಂಡ ನಾಗಯ್ಯ ಸಭೆಯಲ್ಲಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net