ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಮುತ್ತಗದ ಗದ್ದೆ ಪೋಡಿನಲ್ಲಿ ಸೋಮವಾರ ರಾತ್ರಿ ಸೋಲಿಗರ ವಿಶಿಷ್ಟ ರೊಟ್ಟಿ ಹಬ್ಬ ಆಚರಣೆಯಲ್ಲಿ ರಾಗಿ ರೊಟ್ಟಿ, ಕುಂಬಳಕಾಯಿ ಪಲ್ಯವನ್ನು ದೇವರ ಮುಂದೆ ನೈವೇದ್ಯ ಇಟ್ಟಿರುವುದು.
Published on:
Copied
Follow Us
ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ಅದಿವಾಸಿ ಸೋಲಿಗರು ಬೆಟ್ಟದ ಮುತ್ತುಗನಗದ್ದೆ ಪೋಡಿನಲ್ಲಿ ಸೋಮವಾರ ರಾತ್ರಿ ರೊಟ್ಟಿ ಹಬ್ಬದಲ್ಲಿ ತಮ್ಮ ದೈವ ಕುಂಭೇಶ್ವರನಿಗೆ ಪೂಜೆ ಸಲ್ಲಿಸುವ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಪ್ರತಿ ವರ್ಷವೂ ಇಲ್ಲಿನ ಬುಡಕಟ್ಟು ಜನಾಂಗವಾದ ಸೋಲಿಗರು ಈ ಹಬ್ಬವನ್ನು ಒಂದೊಂದು ಪೋಡಿನಲ್ಲೂ ಒಂದೊಂದು ದಿನ ಆಚರಿಸುವ ವಾಡಿಕೆ ಇದೆ.