ಉಮ್ಮತ್ತೂರು ಗ್ರಾಮದಲ್ಲಿ ಕೋಳಿ ಫಾರ್ಮ್ ಬೆಂಕಿಗಾಹುತಿ

 ಯಳಂದೂರು ಸಮೀಪದ ಉಮ್ಮತ್ತೂರು ಗ್ರಾಮದ ಎಂ. ರಾಜೇಶ್ ಅವರ ಕೋಳಿ ಫಾರ್ಮ್‌ಗೆ ಬೆಂಕಿ ಬಿದ್ದು ಕೋಳಿಗಳು ಮೃತಪಟ್ಟಿರುವುದು.
ಯಳಂದೂರು ಸಮೀಪದ ಉಮ್ಮತ್ತೂರು ಗ್ರಾಮದ ಎಂ. ರಾಜೇಶ್ ಅವರ ಕೋಳಿ ಫಾರ್ಮ್‌ಗೆ ಬೆಂಕಿ ಬಿದ್ದು ಕೋಳಿಗಳು ಮೃತಪಟ್ಟಿರುವುದು.
Published on
ಯಳಂದೂರು: ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಕೋಳಿ ಫಾರ್ಮ್‌ಗೆ ಬೆಂಕಿ ತಗುಲಿ ಸಾವಿರಾರು ಕೋಳಿಗಳು ಸಾವಿಗೀಡಾಗಿವೆ.
ಗ್ರಾಮದ ಎಂ. ರಾಜೇಶ್ ಅವರ ಕೋಳಿ ಫಾರ್ಮ್ ಬೆಂಕಿಗಾಹುತಿಯಾಗಿದೆ.
ಕೋಳಿ ಫಾರ್ಮ್‌ನಲ್ಲಿ 7 ಸಾವಿರ ಕೋಳಿಗಳನ್ನು ಸಾಕುತ್ತಿದ್ದರು. ಮಂಗಳವಾರ ರಾತ್ರಿ ಒಂದು ಶೆಡ್‌ಗೆ ಬೆಂಕಿ ಬಿದ್ದಿದ್ದು ಇದರಲ್ಲಿದ್ದ 4 ಸಾವಿರ ಕೋಳಿಗಳು, ಕೋಳಿಗೆ ಹಾಕುವ 10 ಕ್ವಿಂಟಾಲ್ ಫೀಡ್ಸ್, ಅನೇಕ ಪರಿಕರಗಳು, ವಿದ್ಯುತ್ ವಸ್ತುಗಳೆಲ್ಲ ಸುಟ್ಟು ಕರಕಲಾಗಿದೆ.
ಪಕ್ಕದಲ್ಲಿದ್ದ ತೆಂಗಿನ ಮರಗಳಿಗೂ ಬೆಂಕಿಯ ಕೆನ್ನಾಲಿಗೆ ಆವರಿಸಿದ್ದು 14 ಫಲ ಕೊಡುವ ತೆಂಗಿನಮರಗಳು ಸುಟ್ಟು ಕರಕಲಾಗಿದೆ.
ಕುದೇರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net