ಚಿತ್ರಕಲೆ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರು ಹಾಗೂ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಜಯಗಳಿಸಿದವರಿಗೆ ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ವಿತರಣೆ ಮಾಡಲಾಯಿತು. ಆನೆಕಾವಲಿಗೆ ಶ್ರಮಿಸಿದ ಸಿಬ್ಬಂದಿಯನ್ನೂ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹೆಡಿಯಾಲ ಉಪವಿಭಾಗದ ಎಸಿಎಫ್ ಪರಮೇಶ್, ಗೋಪಾಲಸ್ವಾಮಿಬೆಟ್ಟ ವಲಯದ ಆರ್‌ಎಫ್‌ಒ ಸತೀಶ್ ಕುಮಾರ್, ಬಂಡೀಪುರದ ಮೋಹನ್ ಕುಮಾರ್, ಮದ್ದೂರಿನ ಶೈಲೇಂದ್ರಕುಮಾರ್, ನಿಸಾರ್ ಅಹಮದ್, ಶಿವಕುಮಾರ್, ಮಾಜಿ ವೈಲ್ಡ್‌ಲೈಫ್ ವಾರ್ಡನ್ ಮಲ್ಲೇಶಪ್ಪ, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ಕಾಲೇಜಿನ ಪ್ರಾಂಶುಪಾಲೆ ಡಾ.ಮಹದೇವಮ್ಮ ಹಲವರು ಇದ್ದರು.