ಆಳೆತ್ತರಕ್ಕೆ ಬೆಳೆದ ಗಿಡಗಂಟಿ : ಕ್ಟೆು ನಿಂತ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹಲವು ವರ್ಷಗಳಿಂದ ದುರಸ್ತಿಪಡಿಸದ ಕಾರಣ ನಿರುಪಯುಕ್ತವಾಗಿರುವ ಹಿನ್ನೆಲೆಯಲ್ಲಿ ಘಟಕದ ಸುತ್ತಮುತ್ತ ಗಿಡಗಂಟಿ ಬೆಳೆದಿದ್ದು, ಸರ್ಕಾರದ ಲಕ್ಷಾಂತರ ರೂ. ಹಣ ಮಣ್ಣು ಪಾಲಾಗಿದೆ. ಈ ನಡುವೆ ಯಂತ್ರೋಪಕರಣ ತುಕ್ಕು ಹಿಡಿದು ಕರಗುತ್ತಿವೆ. ಅಲ್ಲದೆ ಕಾಲಕಾಲಕ್ಕೆ ನೀರಿನ ಪರೀಕ್ಷೆ ಮಾಡಬೇಕಗಿದೆಯಾದರೂ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನವನ್ನೇ ಹರಿಸಿಲ್ಲ. ಗ್ರಾಮದ ಸುತ್ತಮುತ್ತಲ್ಲಿನ ಪ್ರದೇಶಗಳಾದ ದಾಸನಹುಂಡಿ, ಗಂಗವಾಡಿ, ರಂಗನಾಥಪುರ ಸೇರಿದಂತೆ ತೋಟದ ಮನೆ ನಿವಾಸಿಗಳಿಗೆ ನೀರಿನ ಘಟಕದಿಂದ ಅನುಕೂಲವಾಗುತ್ತಿತ್ತು. ಆದರೆ ಈ ಘಟಕ ಕೆಟ್ಟು ಹೊಗಿ ಹಲವು ತಿಂಗಳು ಕಳೆದರೂ ದುರಸ್ತಿಪಡಿಸದ ಕಾರಣ ಜನರಿಗೆ ಶುದ್ಧ ನೀರಿನ ಭಾಗ್ಯವಿಲ್ಲದಾಗಿದೆ.