ಮಧ್ಯಾಹ್ನ 12 ಗಂಟೆಯಲ್ಲಿ ಕೊಳ್ಳೇಗಾಲದಿಂದ ಮ.ಬೆಟ್ಟಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ಸಿನಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಇದರಲ್ಲಿ ಬಹುತೇಕ ಮ.ಬೆಟ್ಟಕ್ಕೆ ಪ್ರಯಾಣಿಸುತ್ತಿದ್ದ ಭಕ್ತರಿದ್ದರು. ಎಲ್ಲೇಮಾಳದ ಬಳಿ ಬ್ರೇಕ್ ಲೈನರ್ ಸಮಸ್ಯೆಯಿಂದ ಬಸ್ ಕೆಟ್ಟು ನಿಂತಿತು. ಪರಿಣಾಮ ಭಕ್ತರು ಕೆಲಕಾಲ ರಸ್ತೆಬದಿ ಕಾದು ನಿಂತು ಆಗಮಿಸಿದ ಬಸ್‌ಗಳಲ್ಲಿ ನಿಂತುಕೊಂಡೇ ಮ.ಬೆಟ್ಟಕ್ಕೆ ತೆರಳಿದರು. ಇದರಿಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಹೆಚ್ಚಿನ ಸಮಸ್ಯೆ ಅನುಭವಿಸಿದರು. ಸಾರಿಗೆ ಅವ್ಯವಸ್ಥೆಯ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿದ ಭಕ್ತರು ಮ.ಬೆಟ್ಟಕ್ಕೆ ಸುಸ್ಥಿತಿಯಲ್ಲಿರುವ ಬಸ್ ಬಿಡುವಂತೆ ಒತ್ತಾಯಿಸಿದರು.