ಮಕ್ಕಳಲ್ಲಿರುವ ಪ್ರತಿಭೆಯನ್ನು ಪಾಲಕರು ಗುರುತಿಸಲಿ

ಗುಂಡ್ಲುಪೇಟೆಯ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ತಾಲೂಕು ಬ್ರಾಹ್ಮಣ ಸಭಾ ಹಾಗೂ ಕೌಂಡಿಣ್ಯ ವಿಪ್ರ ಬಳಗ, ಶಾರದಾ ಸತ್ಸಂಗ ಸಮಾಜ ಆಶ್ರಯದಲ್ಲಿ ಆಯೋಜಿಸಿದ್ದ ಆಚಾರ್ಯತ್ರಯರ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಆನಂದಕುಮಾರ್, ಮಹಾಲಕ್ಷ್ಮೀ ನಾಗರಾಜು, ಗಾಯತ್ರಿ ಅನಂತು, ರವಿಕಾಂತ್ ಇತರರಿದ್ದರು.

Published on
ಗುಂಡ್ಲುಪೇಟೆ: ತಮ್ಮ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಪ್ರತಿಯೊಬ್ಬ ತಂದೆ-ತಾಯಿ ಗುರ್ತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ತಾಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ ಕೆ.ವಿ.ಗೋಪಾಲ ಕೃಷ್ಣಭಟ್ಟ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ತಾಲೂಕು ಬ್ರಾಹ್ಮಣ ಸಭಾ ಹಾಗೂ ಕೌಂಡಿಣ್ಯ ವಿಪ್ರ ಬಳಗ, ಶಾರದಾ ಸತ್ಸಂಗ ಸಮಾಜ ಆಶ್ರಯದಲ್ಲಿ ಆಯೋಜಿಸಿದ್ದ ಆಚಾರ್ಯತ್ರಯರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಾಲಕರು ಬಾಲ್ಯದಲ್ಲೇ ತಮ್ಮ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಹೆಚ್ಚಿನ ಪ್ರೋತ್ಸಾಹ ಕೊಟ್ಟರೆ ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳ ಸಮಗ್ರ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ಹೇಳಿದರು.
ಕೌಂಡಿನ್ಯ ವಿಪ್ರ ಬಳಗದ ಅಧ್ಯಕ್ಷ ಆನಂದಕುಮಾರ್, ಮಹಿಳಾ ಬಳಗದ ಅಧ್ಯಕ್ಷೆ ಮಹಾಲಕ್ಷ್ಮೀ ನಾಗರಾಜು, ಶಾರದ ತಸ್ಸಂಗ ಸಮಾಜದ ಅಧ್ಯಕ್ಷೆ ಗಾಯತ್ರಿ ಅನಂತು, ಉಪಾಧ್ಯಕ್ಷ ರವಿಕಾಂತ್ ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net