ಪಾಲಕರು ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ

ಕೊಳ್ಳೇಗಾಲದ ವಿಸ್ಡಮ್ ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ 2025-26ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂ ಭಕ್ಕೆ ಬಿಇಒ ಎಂ ಮಂಜುಳಾ ಚಾಲನೆ ನೀಡಿದರು. ನಾಗರಾಜು, ಸುಧಾಪ್ರಕಾಶ್, ಅನಿತಾ, ಸಮೀರಾ ಖಾನಂ, ಭ್ರಮಾರಂಭ ಇದ್ದರು.
ಕೊಳ್ಳೇಗಾಲದ ವಿಸ್ಡಮ್ ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ 2025-26ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂ ಭಕ್ಕೆ ಬಿಇಒ ಎಂ ಮಂಜುಳಾ ಚಾಲನೆ ನೀಡಿದರು. ನಾಗರಾಜು, ಸುಧಾಪ್ರಕಾಶ್, ಅನಿತಾ, ಸಮೀರಾ ಖಾನಂ, ಭ್ರಮಾರಂಭ ಇದ್ದರು.
Published on

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ ಕರೆ

ಕೊಳ್ಳೇಗಾಲ: ಮಕ್ಕಳ ನಡುವೆ ಹೋಲಿಕೆ ಮಾಡಿ ಮಾತನಾಡಬಾರದು. ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಅಡಗಿರುತ್ತದೆ. ಪಾಲಕರು ಅವರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ ಕರೆ ನೀಡಿದರು.
ಪಟ್ಟಣದ ವಿಸ್ಡಮ್ ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ’ಫ್ಯಾಂಟಸಿಯಾ’ 2025- 26ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಪಾಲಕರು ಮಕ್ಕಳ ಆಸೆಗಳಿಗೆ ಸಹಕರಿಸಬೇಕು. ಅವರ ಬೆನ್ನ ಹಿಂದೆಯೇ ಇದ್ದು ಅವರ ಮೇಲೆ ನಿಗಾವಹಿಸಿ ಉತ್ತಮ ದಾರಿಯನ್ನು ತೋರಿಸಬೇಕು. ಇಂದು ವಿಸ್ಡಮ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಸಡಗರ-ಸಂಭ್ರಮದಿಂದ ನಡೆಯುತ್ತಿದೆ. ತಾಲೂಕಿನಲ್ಲಿ ಒಟ್ಟು 161 ಶಾಲೆಗಳಿದ್ದು. ಇದರಲ್ಲಿ ಎರಡು ಶಾಲೆಗಳು ಸಿಬಿಎಸ್‌ಸಿ ಕೇಂದ್ರ ಪಠ್ಯಕ್ರಮ ಹೊಂದಿದೆ. ಅದರಲ್ಲಿ ವಿಸ್ಡಮ್ ಶಾಲೆಯು ಒಂದಾಗಿದೆ. ಈ ಶಾಲೆಯು ಶೇ.ನೂರರಷ್ಟು ಫಲಿತಾಂಶವನ್ನು ಕಾಯ್ದುಕೊಂಡು ಬರುತ್ತಿದೆ. ಮಕ್ಕಳ ಉತ್ತಮ ಶಿಕ್ಷಣ ನೀಡುತ್ತಿದೆ ಎಂದರು.
ವಾರ್ಷಿಕೋತ್ಸವ ದಿನ ಪಾಲಕರು ಮಕ್ಕಳ ಸಾಧನೆ ನೋಡಿ ಸಂಭ್ರಮಿಸುವ ದಿನವಾಗಿದೆ. ಶಾಲೆ ಮತ್ತು ಪಾಲಕರ ನಡುವೆ ಬಾಂಧವ್ಯ ಬೆಸೆಯುತ್ತದೆ. ವೇದಿಕೆಯು ಪಾಲಕರು ಮಕ್ಕಳ ಪ್ರತಿಭೆ ನೋಡಿ ಸಂಭ್ರಮಿಸಲು ಅವಕಾಶ ಮಾಡಿಕೊಡುತ್ತದೆ ಎಂದರು.
ಈ ವೇಳೆ ಶಾಲೆಯ ಶಿಕ್ಷಕಿ ಮಮತಾ ಶಾಲಾ ವಾರ್ಷಿಕ ವರದಿ ಮಂಡಿಸಿದರು. ಪ್ರತಿಭಾನ್ವಿತ ಮಕ್ಕಳಿಗೆ ವೇದಿಕೆ ಮೇಲಿರುವ ಗಣ್ಯರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಸಾಂಸ್ಕೃತಿಕ ಕಲರವ: ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಶಾಲೆಯ ಮಕ್ಕಳು ಉತ್ಸುಕರಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮನರಂಜಿಸಿದರು. ಪಾಲಕರು ಹಾಗೂ ಸಾರ್ವಜನಿಕರು ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಇಸಿಒ ನಾಗರಾಜು, ವಿಸ್ಡಮ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಸುಧಾಪ್ರಕಾಶ್, ಬಿಆರ್‌ಪಿ ಅನಿತಾ, ಸಿಆರ್‌ಪಿ ಸಮೀರಾ ಖಾನಂ, ಶಾಲೆಯ ಪ್ರಾಂಶುಪಾಲೆ ಭ್ರಮಾರಂಭ ಹಾಗೂ ಶಾಲಾ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net