ಪೇಂಟರ್ ಮಗಳ ಅದ್ವಿತೀಯ ಸಾಧನೆ

ಕಲಾ ವಿಭಾಗದಲ್ಲಿ 586 ಅಂಕ ಪಡೆದು ಜಿಲ್ಲೆಗೆ ಟಾಪರ್ ಸ್ಥಾನ ಪಡೆದ ಎಂ.ಚೈತ್ರಾ ಅವರಿಗೆ ಪಾಲಕರು ಸಹಿ ತಿನಿಸುತ್ತಿರುವುದು
ಕಲಾ ವಿಭಾಗದಲ್ಲಿ 586 ಅಂಕ ಪಡೆದು ಜಿಲ್ಲೆಗೆ ಟಾಪರ್ ಸ್ಥಾನ ಪಡೆದ ಎಂ.ಚೈತ್ರಾ ಅವರಿಗೆ ಪಾಲಕರು ಸಹಿ ತಿನಿಸುತ್ತಿರುವುದು
Published on
ಕೊಳ್ಳೇಗಾಲ: ಕಟ್ಟಡ, ಮನೆಗಳಿಗೆ ಬಣ ಹಚ್ಚುವ ತಂದೆಯ ಬದುಕಿಗೆ ಮಗಳು ಪಿಯುಸಿಯಲ್ಲಿ ಉತ್ತಮ ಫಲಿತಾಂಶದ ಮೂಲಕ ಬಣ್ಣ ತುಂಬಿದ್ದಾಳೆ.
ತಾಲೂಕಿನ ಹೊಸ ಹಂಪಾಪುರ ಗ್ರಾಮದ ನಿವಾಸಿ ಮಹೇಶ್ ಮತ್ತು ಲೀಲಾ ದಂಪತಿ ಪುತ್ರಿ ಪಟ್ಟಣದ ಎಸ್.ವಿ.ಕೆ ಪದವಿ ಪೂರ್ವ ಕಾಲೇಜಿನ ಎಂ.ಚೈತ್ರಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 586 (ಕಲಾ ವಿಭಾಗ) ಪಡೆದು ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ಈಕೆಯ ತಂದೆ ವೃತ್ತಿಯಲ್ಲಿ ಪೇಂಟರ್ ಆಗಿದ್ದು ಕೂಲಿ ಕೆಲಸ ಮಾಡಿ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಜೀವನ ಕಟ್ಟಿಕೊಡಲು ಶ್ರಮಿಸುತ್ತಿದ್ದಾರೆ.
ಅಂತೆಯೇ ಪಟ್ಟಣದ ರಾಜೀವ್ ನಗರ ನಿವಾಸಿ, ಸಿಮೆಂಟ್ ಇಟ್ಟಿಗೆ ಫ್ಯಾಕ್ಟರಿ ಮಾಲೀಕ ಇಂದ್ರೇಶ್ ಮತ್ತು ಮಮತ ದಂಪತಿ ಪುತ್ರಿ ಶ್ರೀ ವಾಸವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಭೂಮಿಕಾ ವಿಜ್ಞಾನ ವಿಭಾಗದಲ್ಲಿ 587 (ಶೇ.98) ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ದ್ವಿತೀಯ-ತೃತೀಯ ಸ್ಥಾನ: ಕಲಾ ವಿಭಾಗದಲ್ಲಿ ನಿಸರ್ಗ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಫ್ರೀನ್ 583 (ಶೇ. 97.31) ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವಾಸವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಉಷಾ 590 (ಶೇ.98,33) ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದೇ ಕಾಲೇಜಿನ ವಿದ್ಯಾರ್ಥಿನಿ ಸಾಕ್ಷಿ 589(ಶೇ.98) ಅಂಕ ಪಡೆದು ಜಿಲ್ಲೆಗೆ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ವಾಸವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎನ್.ಸಜಿನಿ 585 (ಶೇ.97.5) ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ನಿಸರ್ಗ ಪದವಿ ಪೂರ್ವ ಕಾಲೇಜಿನ ಮನುಶ್ರೀ 584 (ಶೇ.93.33) ಅಂಕ ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net