ತಮಿಳರ ವರ್ತನೆ ವಿರುದ್ಧ ಕರವೇ ಆಕ್ರೋಶ

ತಮಿಳರ ವರ್ತನೆ ಖಂಡಿಸಿ ಗುಂಡ್ಲುಪೇಟೆಯಲ್ಲಿ ಕರವೇ ಕಾರ್ಯಕರ್ತರು ಎಂ.ಎಸ್.ತನ್ಮಯ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮಾಧು, ರಾಜೇಂದ್ರ, ರಮೇಶ್ ನಾಯಕ್, ನಾಗರಾಜು, ವಸಂತ, ಜವರಶೆಟ್ಟಿ, ಸತೀಶ್, ಸ್ವಾಮಿ, ಮಂಜುನಾಥ್ ಶೆಟ್ಟಿ, ಕುನಾಲ್ ಗೌಡ, ಪ್ರೀತಂ, ಹಂಗಳ ಬಸವ, ಮಣಿಕಂಠ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕದ ಶಬರಿಮಲೆ ಯಾತ್ರಿಗಳ
  • ವಾಹನ ತಡೆದು ಪುಂಡಾಟ ಮೆರೆದಿರುವ
  • ತಮಿಳರ ವರ್ತನೆ ಖಂಡಿಸಿ
ಗುಂಡ್ಲುಪೇಟೆ: ಕರ್ನಾಟಕದ ಶಬರಿಮಲೆ ಯಾತ್ರಿಗಳ ವಾಹನ ತಡೆದು ಪುಂಡಾಟ ಮೆರೆದಿರುವ ತಮಿಳರ ವರ್ತನೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಎದುರು ಸ್ವಲ್ಪ ಕಾಲ ರಸ್ತೆ ಸಂಚಾರ ತಡೆ ನಡೆಸಿದ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ನಂತರ ತಾಲೂಕು ಕಚೇರಿ ಬಳಿ ಜಮಾವಣೆಗೊಂಡು, ಇತ್ತೀಚೆಗೆ ತಾಲೂಕಿನ ಅಣ್ಣೂರು ಕೇರಿ ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೆ ಯಾತ್ರೆ ಮುಗಿಸಿಕೊಂಡು ತಮಿಳುನಾಡಿಗೆ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ತಮಿಳುನಾಡಿನ ಕೆಲ ಕಿಡಿಗೇಡಿಗಳು ಕನ್ನಡ ಬಾವುಟ ತೆರವುಗೊಳಿಸಿ ಹಲ್ಲೆ ಮಾಡಿರುವುದನ್ನು ಖಂಡಿಸಿದರು.
ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜ್ಯನ್ಯ ತಡೆಗಟ್ಟುವಂತೆ ಒತ್ತಾಯಿಸಿದ ಮನವಿಪತ್ರವನ್ನು ತಹಸೀಲ್ದಾರ್ ಎಂ.ಎಸ್.ತನ್ಮಯ್ ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಗೌರವಾಧ್ಯಕ್ಷ ಮಾಧು, ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ, ರಮೇಶ್ ನಾಯಕ್, ನಾಗರಾಜು, ವಸಂತ, ಜವರಶೆಟ್ಟಿ, ಸತೀಶ್, ಸ್ವಾಮಿ, ಮಂಜುನಾಥ್ ಶೆಟ್ಟಿ, ಕುನಾಲ್ ಗೌಡ, ಪ್ರೀತಂ,ಹಂಗಳ ಬಸವ, ಮಣಿಕಂಠ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net