ಅಧಿಕ ಪ್ರಮಾಣದಲ್ಲಿದ್ದ ತ್ಯಾಜ್ಯವನ್ನು ಸ್ವಯಂ ಸೇವಕರು ಸಂಗ್ರಹಿಸಲು ಕಷ್ಟಸಾಧ್ಯವಿರುವ ಹಿನ್ನೆಲೆಯಲ್ಲಿ ಇದಕ್ಕಾಗಿ 1 ವಾಟರ್ ಟ್ಯಾಂಕರ್, 1 ಜೆ.ಸಿ.ಬಿ, 2 ಟಿಪ್ಪರ್ ಮತ್ತು 2 ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದೆ. ವಾಹನಗಳ ಮೂಲಕ ರಾಡಿಯಾಗಿ ಹರಡಿದ್ದ ಕಸವನ್ನು ಒಂದೆಡೆಗೆ ಸಂಗ್ರಹ ಮಾಡಲಾಗುತ್ತಿದ್ದು, ಈ ಕಾರ್ಯದ ಎರಡನೇ ದಿನವಾದ ಬುಧವಾರವೂ ಕಸ ಸಂಗ್ರಹಣೆ ಮುಂದುವರೆಯಿತು. ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಲು ಇನ್ನೂ ಕೆಲವು ದಿನಗಳು ಹಿಡಿಯಬಹುದಾಗಿದ್ದು, ಎಷ್ಟು ದಿನಗಳಾದರೂ ಶ್ರಮದಾನ ಮಾಡಲು ಮೂರು ಸಂಸ್ಥೆಗಳು ಸಿದ್ಧವಿವೆ.