ಹಣ್ಣಿನ ತೋಟ, ಸಮೃದ್ಧಿಯ ನೋಟ

ರೈತ ಶಂಕರ್ ಅವರ ಜಮೀನಿನಲ್ಲಿ ಬೆಳೆದಿರುವ ಅಂಜೂರ
ರೈತ ಶಂಕರ್ ಅವರ ಜಮೀನಿನಲ್ಲಿ ಬೆಳೆದಿರುವ ಅಂಜೂರ
Published on

ಪ್ರಮುಖ ಮುಖ್ಯಾಂಶಗಳು

  • ಬಿ.ಮಲ್ಲಯ್ಯನಪುರದಲ್ಲಿ ನೈಸರ್ಗಿಕ ಕೃಷಿ ಮಾಡುತ್ತಿರುವ ಯುವ ರೈತ ಶಂಕರ್
  • ಹೇರಳವಾಗಿ ಬೆಳೆದಿರುವ ವಿವಿಧ ಬಗೆಯ ಲಗಳು
ಚಾಮರಾಜನಗರ: ಆಧುನಿಕ ಕೃಷಿಯಲ್ಲಿ ನೈಸರ್ಗಿಕ ಪದ್ಧತಿ ಕಣ್ಮರೆಯಾಗುತ್ತಿರುವ ಹೊತ್ತಿನಲ್ಲಿ ಇಲ್ಲೊಬ್ಬ ಯುವ ರೈತ
ಪರಿಸರ ಸ್ನೇಹಿ ವಿಧಾನದಲ್ಲಿ ಸೃಷ್ಟಿಸಿರುವ ಹಣ್ಣಿನ ತೋಟ ಸಮೃದ್ಧಿಯ ನೋಟದಿಂದ ಗಮನ ಸೆಳೆಯುತ್ತಿದೆ.
ತಾಲೂಕಿನ ಬೆಂಡರವಾಡಿ ಸಮೀಪದ ಬಿ.ಮಲ್ಲಯ್ಯನಪುರ ಗ್ರಾಮದ ಶಿವಣ್ಣ ಮತ್ತು ರತ್ನಮ್ಮ ದಂಪತಿ ಪುತ್ರ ಎಸ್.ಶಂಕರ್ ಬೇರೆ ಜಿಲ್ಲೆಯಲ್ಲಿ ಖಾಸಗಿ ಉದ್ಯೋಗ ಬಿಟ್ಟು ಬಂದು ನೈಸರ್ಗಿಕ ವಿಧಾನದಲ್ಲಿ ಕೃಷಿ ಮಾಡುತ್ತಿದ್ದಾರೆ. ಗ್ರಾಮದಲ್ಲಿರುವ 4.5 ಎಕರೆಯಲ್ಲಿ ವಿವಿಧ ಬೆಳೆಗಳನ್ನು ಹಾಕಿದ್ದಾರೆ. ಇವುಗಳಲ್ಲಿ ಹಣ್ಣಿನ ಗಿಡಗಳು ಪ್ರಧಾನವಾಗಿದೆ. ಜಮೀನಿನ ಪ್ರವೇಶದಲ್ಲೇ ಸಿಗುವ ಎರಡು ಬೃಹತ್ ಗಾತ್ರದ ಹುಣಸೆ ಮರಗಳು ಭೂಮಿಯ ಲವತ್ತತೆಯನ್ನು ಹೆಚ್ಚಿಸುತ್ತಿವೆ.
ಅಕ್ಕ-ಪಕ್ಕದಲ್ಲಿ 250 ಅಡಕೆ, 310 ತೆಂಗು, ಬಾಳೆ (ಪಚ್ಚಬಾಳೆ) ಬೆಳೆದಿವೆ. ಇವೆಲ್ಲವುಗಳನ್ನೂ ಮೀರಿ ಹಣ್ಣಿನ ಗಿಡಗಳು ಗಮನ ಸೆಳೆಯುತ್ತಿವೆ. ಸಪೋಟಾ, ಮಾವಿನ ಮರಗಳು, ಬಟರ್ ್ರೂಟ್, ಸೀತಾ ಲ, ಲಕ್ಷ್ಮಣ ಲ, ನೇರಳೆ, ಕಿತ್ತಳೆ, ಮೂಸಂಬಿ, ಅಂಜೂರಾ, ಪರಂಗಿ, ಹಲಸು, ನಿಂಬೆ, ಸೀಬೆ, ಚಕ್ಕೋತಾ, ಸ್ಟಾರ್ ್ರೂಟ್, ವಾಟರ್ ಆಪಲ್ ಬೆಳೆದಿದ್ದಾರೆ. ಪಕ್ಕದ ಜಮೀನಿನಲ್ಲಿ ಅರ್ಧ ಎಕರೆಯಲ್ಲಿ ಅರಿಶಿಣ ಬೆಳೆದಿದ್ದಾರೆ.
ಇವುಗಳನ್ನು ನೈಸರ್ಗಿಕ ವಿಧಾನದಲ್ಲಿ ಬೆಳೆಯುತ್ತಿದ್ದಾರೆ. ಎರಡು ಹಸುಗಳನ್ನು ಸಾಕಿದ್ದು, ಸಗಣಿಯನ್ನು ಗಿಡಗಳಿಗೆ ಗೊಬ್ಬರವಾಗಿ ಬಳಕೆ ಮಾಡುತ್ತಿದ್ದಾರೆ. ತೆಂಗು ಮತ್ತು ಇತರೆ ಗಿಡಗಳ ತ್ಯಾಜ್ಯವನ್ನು ಮಣ್ಣಿನಲ್ಲಿ ಕೊಳೆಸುತ್ತಿದ್ದಾರೆ. ಸುಮಾರು 5 ವರ್ಷಗಳಿಂದ ಭೂಮಿಯನ್ನು ಉಳುಮೆ ಮಾಡಿಲ್ಲ. ತರಕಾರಿ ಬೆಳೆಯುವುದಕ್ಕಾಗಿಯೇ ಪ್ರತ್ಯೇಕವಾದ ಸ್ಥಳವನ್ನು ಮೀಸಲು ಇರಿಸಿದ್ದಾರೆ. ದೇಸಿ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಕೊಟ್ಟುಕೊಂಡಿದ್ದಾರೆ. ಅರಿಶಿಣ ಕೃಷಿಯನ್ನೂ ಸಾವಯವ ವಿಧಾನದಲ್ಲಿ ಮಾಡುತ್ತಿದ್ದಾರೆ.
ವೈಜ್ಞಾನಿಕ ವಿಧಾನದ ಪ್ರಯೋಗ:
ರೈತ ಶಂಕರ್ ತಮ್ಮ ತೋಟದಲ್ಲಿ ವೈಜ್ಞಾನಿಕ ವಿಧಾನವನ್ನು ಅನುಸರಿಸುವ ಮೂಲಕ ಮಾದರಿಯಾಗಿದ್ದಾರೆ. ಹಣ್ಣಿನ ಗಿಡಗಳ ಸಾಲಿನ ನಡುವೆ ಗೊಬ್ಬರದ ಗಿಡಗಳನ್ನು ಸಾಲಾಗಿ ಹಾಕಿದ್ದಾರೆ. ಈ ಗಿಡ ಬೇರೆ ಗಿಡಗಳ ಬೆಳವಣಿಗೆಗೆ ಪೂರಕವಾಗಿದೆ. ಸಾರಜನಕ, ಪೊಟ್ಯಾಷ್, ಜಲಜನಕವನ್ನು ನೀಡುತ್ತದೆ. ಇದರ ಪರಿಣಾಮ ಅಕ್ಕ-ಪಕ್ಕದ ಗಿಡಗಳು ಸಮೃದ್ಧವಾಗಿ ಬೆಳೆಯುತ್ತವೆ. ಗೊಬ್ಬರದ ಗಿಡದ ಎಲೆಗಳನ್ನು ಭೂಮಿಗೆ ಹಾಕಿ ಕೊಳೆಸಿ ಮಣ್ಣಿನ ಲವತ್ತತೆಯನ್ನು ಹೆಚ್ಚಿಸಲಾಗುತ್ತಿದೆ. ಇದರೊಂದಿಗೆ ನುಗ್ಗೆ ಗಿಡ ಕೂಡ ಮಣ್ಣಿನ ಗುಣಧರ್ಮಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಹೊರಗಿನಿಂದ ಹಣ ಕೊಟ್ಟು ತಂದ ಗೊಬ್ಬರವನ್ನು ಹಾಕುವ ಬದಲು ನೈಸರ್ಗಿಕವಾಗಿಯೇ ದೊರೆಯುವ ಪೋಷಕಾಂಶಗಳನ್ನು ಬಳಸಿಕೊಳ್ಳಲಾಗುತ್ತಿದೆ.
ವಿಷ ಮುಕ್ತ ಹಣ್ಣು ಮೊದಲು ಮನೆ ಬಳಕೆಗೆ:
ರಾಸಾಯನಿಕ ಬಳಕೆಯಿಂದ ಆಹಾರ ವಿಷವಾಗುತ್ತಿದ್ದು, ಇದಕ್ಕೆ ಹಣ್ಣುಗಳೇನು ಹೊರತಾಗಿಲ್ಲ. ಔಷಧಿ ಹಾಕಿ ಬೆಳೆದ ಹಣ್ಣು, ತರಕಾರಿಗಳು ಗೊತ್ತಿಲ್ಲದೆ ಜನರ ಹೊಟ್ಟೆ ಸೇರುತ್ತಿರುವ ವಿಷವಾಗುತ್ತಿವೆ. ಆಧುನಿಕ ಜೀವನ ಶೈಲಿ, ಕೆಲಸದ ಒತ್ತಡ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆರೋಗ್ಯ ವೃದ್ಧಿಸಿಕೊಳ್ಳಲು ಸೇವಿಸುವ ಹಣ್ಣು, ತರಕಾರಿಗಳು ವ್ಯತಿರಿಕ್ತವಾಗುತ್ತಿವೆ. ಇದನ್ನು ಅರಿತಿರುವ ರೈತ ಶಂಕರ್ ತನ್ನ ತೋಟದಲ್ಲಿ ವಿಷ ಮುಕ್ತ ಹಣ್ಣಿನ ಗಿಡಗಳನ್ನು ಬೆಳೆಯುತ್ತಿದ್ದಾರೆ. ಈ ಹಣ್ಣುಗಳನ್ನು ಮೊದಲು ಮನೆಯ ಬಳಕೆಗೆ ಇಡುತ್ತಿದ್ದಾರೆ. ನಂತರಷ್ಟೇ ಮಾರಾಟದತ್ತ ನೋಡುತ್ತಿದ್ದಾರೆ.
ಗ್ರಾಮಕ್ಕೆ ಮರಳಿ ಕೃಷಿಕನಾದ ಶಂಕರ್:
ಬೇರೆ ಜಿಲ್ಲೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಂಕರ್ ಗ್ರಾಮಕ್ಕೆ ಮರಳಿ ನೈಸರ್ಗಿಕ ವಿಧಾನದಲ್ಲಿ ಕೃಷಿ ಮಾಡುತ್ತಿರುವುದು ಇಂದಿನ ಯುವಕರಿಗೆ ಸ್ಫೂರ್ತಿಯಾಗುತ್ತದೆ. ಕೃಷಿಯಿಂದ ವಿಮುಖರಾಗಿ ನಗರ ಪ್ರದೇಶಗಳಲ್ಲಿ ಕೆಲಸ ಹುಡುಕಿಕೊಂಡು ಹೋಗುವುದು, ಗ್ರಾಮಗಳು ತಂದೆ-ತಾಯಿಯರಿಂದ ಮಾತ್ರ ಕೂಡಿರುವ ವೃದ್ಧಾಶ್ರಮಗಳಾಗುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಶಂಕರ್ ಅವರಂತಹ ಕೆಲವು ಯುವಕರು ಪಟ್ಟಣ ಬಿಟ್ಟು ಹಳ್ಳಿಗೆ ಮರಳಿ ಕೃಷಿ ಮಾಡುತ್ತಿರುವುದು ಇತರರಿಗೆ ಮಾದರಿಯಾಗುವ ವಿಚಾರ.
ಹಣ್ಣುಗಳ ಗೊಂಚಲ ರಾಶಿ:
ರೈತ ಶಂಕರ್ ಅವರ ತೋಟದಲ್ಲಿ ವಿವಿಧ ಹಣ್ಣುಗಳು ಕಾಯಿ ಕಚ್ಚಿವೆ. ಗಿಡಗಳ ರೆಂಬೆ-ಕೊಂಬೆಗಳಲ್ಲಿ ಗೊಂಚಲ ರಾಶಿ ತೂಗಾಡುತ್ತಿವೆ. ಚಕ್ಕೋತ, ಸ್ಟಾರ್ ್ರೂಟ್, ವಾಟರ್ ಆಪಲ್ ಕಾಯಿ ಕಚ್ಚಿವೆ. ಗಿಡದ ತುಂಬೆಲ್ಲಾ ಬಟರ್ ್ರೂಟ್ ತೂಗಾಡುತ್ತಿವೆ. ತೆಂಗಿನ ಮರದ ಲ ಕಣ್ಣು ಕುಕ್ಕುತ್ತಿವೆ. ಇದರ ನಡುವೆ ಅಂಜೂರದ ರಾಶಿ ರಾಶಿಯಾಗಿ ಬೆಳೆದಿವೆ. ಪಕ್ಷಿಗಳಿಗೂ ಆಹಾರವಾಗುತ್ತಿವೆ.
ವಿಷ ಮುಕ್ತ ಆಹಾರ ಬೆಳೆಯಬೇಕೆಂಬ ಉದ್ದೇಶದಿಂದ ನೈಸರ್ಗಿಕ ಕೃಷಿ ಮಾಡುತ್ತಿದ್ದೇನೆ. ಊರುಗಳಲ್ಲಿ ಜಮೀನು ಇದ್ದರೂ ಕೃಷಿ ಮಾಡದೆ ಕೆಲಸಕ್ಕೆ ಹೋಗುತ್ತಿದ್ದಾರೆ. ಈ ರೀತಿ ನಾನು ಆಗಬಾರದು ಎಂದು ಖಾಸಗಿ ಕಂಪನಿಯ ಕೆಲಸ ಬಿಟ್ಟು ಕೃಷಿಗೆ ಮರಳಿದ್ದೇನೆ.
ಎಸ್.ಶಂಕರ್, ರೈತ, ಬಿ.ಮಲ್ಲಯ್ಯನಪುರ, ಚಾಮರಾಜನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net