ಹಿರಿಯ ಹೋರಾಟಗಾರ ಕೆ.ವೆಂಕಟರಾಜು ಮಾತನಾಡಿ, ಸಂವಿಧಾನ ಬದ್ಧವಾಗಿ ಉಚಿತವಾಗಿ ಸಿಗಬೇಕಾದ ಶಿಕ್ಷಣವನ್ನು ಕಸಿಯುವ ಹುನ್ನಾರ ನಡೆಯುತ್ತಿದೆ. ಶಿಕ್ಷಣವೇ ಮಕ್ಕಳಿಗೆ ಆಸ್ತಿಯಾಗಿದ್ದು, ಆಸ್ತಿಯನ್ನು ಖಾಸಗಿಯವರ ಕೈಗೆ ಕೊಡುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಯಲ್ಲಿ ಕೌಶಲ್ಯ ತರಬೇತಿ ಕೊಡುವುದಾಗಿ ಹೇಳಾಗುತ್ತಿದೆ. ಐಟಿಐ, ಪಾಲಿಟೆಕ್ನಿಕ್‌ಗಳಂತ ಕೌಶಲ್ಯ ತರಬೇತಿ ಕೋರ್ಸ್‌ಗಳು ಮುಚ್ಚಿ ಹೋಗುತ್ತಿವೆ. ನಮ್ಮ ಪೂರ್ವಜನರು ಗ್ರಾಮಕ್ಕೊಂದು ಸರ್ಕಾರಿ ಶಾಲೆ ತೆರೆದು ಊರಲ್ಲಿ ಮಕ್ಕಳ ಶಿಕ್ಷಣಕ್ಕೆ ಸೌಕರ್ಯ ಒದಗಿಸಿಕೊಡುತ್ತಿದ್ದರು. ಜಿಲ್ಲೆಯಲ್ಲಿ ಶತಮಾನ ಕಂಡ ಹಲವು ಸರ್ಕಾರಿ ಶಾಲೆಗಳಿವೆ. ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆ ತೆರೆಯುವ ಪ್ರಯತ್ನದಿಂದ ಸರ್ಕಾರಿ ಶಾಲೆಗಳಿಗೆ ಕುತ್ತು ತರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಮಾವೇಶದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಚಂದ್ರಕಲಾ, ಹೋರಾಟಗಾರರಾದ ಹೇಮಲತಾ, ಎಚ್.ಎಂ.ಬಸವರಾಜು,ಟಿ.ಆರ್.ಸುನೀಲ್, ಯು.ಕೆ.ಚಂದನ ಮತ್ತು ಶಾಲಾ ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು.