ರಸ್ತೆ ಮಧ್ಯೆ ತೆರೆದ ಮ್ಯಾನ್‌ಹೋಲ್

ಪಟ್ಟಣದ ಡಾ.ವಿಷ್ಣುವರ್ಧನ್ ರಸ್ತೆಯಲ್ಲಿ ತೆರೆದ ಮ್ಯಾನ್ ಹೋಲ್‌ಗೆ ಬ್ಯಾರಿಗೇಟ್ ಅಡ್ಡಲಾಗಿ ಹಾಕಿರುವುದು.
ಪಟ್ಟಣದ ಡಾ.ವಿಷ್ಣುವರ್ಧನ್ ರಸ್ತೆಯಲ್ಲಿ ತೆರೆದ ಮ್ಯಾನ್ ಹೋಲ್‌ಗೆ ಬ್ಯಾರಿಗೇಟ್ ಅಡ್ಡಲಾಗಿ ಹಾಕಿರುವುದು.
Published on
ಕೊಳ್ಳೇಗಾಲ: ಪಟ್ಟಣದ ಡಾ.ವಿಷ್ಣುವರ್ಧನ್ ರಸ್ತೆಯಲ್ಲಿ ತೆರೆದ ಮ್ಯಾನ್ ಹೋಲ್ ಮುಚ್ಚದೆ ನಗರಸಭೆ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ. ರಸ್ತೆಯಲ್ಲಿ ಹಲವು ದಿನಗಳಿಂದ ಮ್ಯಾನ್ ಹೋಲ್ ತೆರೆದುಕೊಂಡಿದೆ. ಇದರಿಂದ ಸಂಭವಿಸಬಹುದಾದ ಅಪಾಯ ತಪ್ಪಿಸಲು ಪೊಲೀಸ್ ಇಲಾಖೆ ಬ್ಯಾರಿಕೇಡ್ ಅನ್ನು ಅಡ್ಡಲಾಗಿ ನಿಲ್ಲಿಸಿದೆ. ಆದರೆ ಇಲ್ಲಿಯವರೆಗೂ ಮ್ಯಾನ್‌ಹೋಲ್ ಮುಚ್ಚಲು ನಗರಸಭೆ ಅಧಿಕಾರಿಗಳು ಕ್ರಮವಹಿಸಿಲ್ಲ.
ಡಾ.ವಿಷ್ಣುವರ್ದನ್ ರಸ್ತೆ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಯಾಗಿದ್ದು, ಸದಾ ಜನ-ಜಂಗುಳಿ ರಸ್ತೆಯಲ್ಲಿರುತ್ತದೆ. ಇನ್ನೂ ಬಸ್‌ಗಳು ಬಸ್ ನಿಲ್ದಾಣಕ್ಕೆ ಪ್ರವೇಶಿಸಲು ಈ ರಸ್ತೆಯಲ್ಲಿಯೇ ಬರಬೇಕು. ಬಟ್ಟೆ ಅಂಗಡಿ, ಹೋಟೆಲ್, ಬೇಕರಿ, ಮೊಬೈಲ್ ಶಾಪ್, ವೈನ್ ಶಾಪ್ ಸೇರಿದಂತೆ ಇನ್ನಿತರ ವಾಣಿಜ್ಯ ಮಳಿಗೆಗಳು ರಸ್ತೆಯಲ್ಲಿರುವುದರಿಂದ ಜನ ಹಾಗೂ ವಾಹನ ಸಂಚಾರ ದಟ್ಟವಾಗಿರುತ್ತದೆ.
ನಗರಸಭೆ ತೆರೆದ ಮ್ಯಾನ್‌ಹೋಲ್‌ಗೆ ತಾತ್ಕಾಲಿಕವಾಗಿ ಬ್ಯಾರಿಕೇಡ್ ನಿಲ್ಲಿಸಿ ಸಮಸ್ಯೆ ಬಗೆಹರಿಯಿತು ಎಂದು ಕೈಕಟ್ಟಿ ಕುಳಿತಿದೆ. ರಸ್ತೆ ಮಧ್ಯೆದಲ್ಲಿರುವ ಬ್ಯಾರಿಕೇಡ್‌ನಿಂದ ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ಈ ತೆರೆದ ಮ್ಯಾನ್‌ಹೋಲ್‌ನಿಂದ ಯಾವುದಾದರೂ ಅನಾಹುತ ಸಂಭವಿಸುವ ಮುನ್ನ ಮ್ಯಾನ್ ಹೋಲ್ ಮುಚ್ಚಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net