ಶಾಖೆಗಳಲ್ಲಿ ಬಾಕಿ ಉಳಿದಿದ್ದ ಅರ್ಜಿಗಳೆಷ್ಟು, ಯಾಕೆ ಬಾಕಿ ಉಳಿದಿವೆ, ವಿಲೇವಾರಿ ವಿಳಂಬಕ್ಕೆ ಕಾರಣವೇನು ಎಂದು ಕೇಳಿದ್ದರು. ಈ ವೇಳೆ ಪೌರಾಯುಕ್ತ ಪರಶುರಾಮ್ ಅವರ ಲಾಗಿನ್‌ನಲ್ಲಿ ಇ-ಸ್ವತ್ತು, ಖಾತೆ ಬದಲಾವಣೆಗಾಗಿ ಸಲ್ಲಿಸಿದ್ದ 93 ಅರ್ಜಿಗಳು ಬಾಕಿ ಉಳಿದಿದ್ದವು. ಈ ಹಿನ್ನೆಲೆಯಲ್ಲಿ ಪೌರಾಯುಕ್ತರಿಗೆ ನೋಟೀಸ್ ಕೊಟ್ಟಿರುವ ಡಿಸಿ ಶ್ರೀರೂಪಾ, ಸರ್ಕಾರದ ಕೆಲಸವನ್ನು ಸಕಾಲದಲ್ಲಿ ಮಾಡಿ ಮುಗಿಸಬೇಕಾಗಿದೆ. ಈ ರೀತಿ ಅರ್ಜಿಗಳನ್ನು ಬಾಕಿ ಉಳಿಸಬಾರದು. ತಕ್ಷಣ ವಿಲೇವಾರಿ ಮಾಡಬೇಕೆಂದು ಸೂಚನೆ ನೀಡಿದ್ದಾರೆ.