ಇ-ಸ್ವತ್ತು ಮಾಡಿಸಿಕೊಡಬೇಕೆಂಬ ಮನವಿಗಳು ಸಭೆಯಲ್ಲಿ ಹೆಚ್ಚಾಗಿ ಕೇಳಿಬಂದವು. ಇದರಲ್ಲಿ ಆಶ್ಚರ್ಯ ಪಡುವಂತಾದ್ದೇನಿಲ್ಲ. ಏಕೆಂದರೆ ಚಾಮರಾಜನಗರ, ಕೊಳ್ಳೇಗಾಲದ ನಗರಸಭೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸ್ವಂತ ಜಾಗದ ಇ-ಸ್ವತ್ತು ಮಾಡಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಇದೆ. ಹೀಗಿರುವಾಗ ಸರ್ಕಾರದ ಭೂಮಿಯಲ್ಲಿರುವ ಪೌರಕಾರ್ಮಿಕರಿಗೆ ಬೇಗ ಇ-ಸ್ವತ್ತು ಮಾಡಿಕೊಡುವಷ್ಟು ಮಾನವೀಯ ಕಾರ್ಯ ನೆನೆಗುದಿಗೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಬಹುಪಾಲು ಪೌರಕಾರ್ಮಿಕರಿಗೆ ತಾವು ವಾಸ ಮಾಡುವ ಜಾಗದ ಇ-ಸ್ವತ್ತು ಸಿಕ್ಕಿಲ್ಲ. ಇನ್ನು ಕೆಲವರಿಗೆ ನಿವೇಶನವಿಲ್ಲ. ಸಭೆಯಲ್ಲಿ ತಾಲೂಕಿನ ಮಂಗಲ ಗ್ರಾಮದ ಪೌರಕಾರ್ಮಿಕ ಮಾದೇವ ಮಾತನಾಡಿ, ನಾವು ಗ್ರಾಮದ 3 ನಿವೇಶನಗಳಲ್ಲಿ 8 ಕುಟುಂಬಗಳು ವಾಸ ಮಾಡುತ್ತಿದ್ದೇವೆ. ಜಾಗದ ಸಮಸ್ಯೆ ಇರುವ ಕಾರಣ ನಿವೇಶನ ನೀಡಬೇಕೆಂದು ಕೋರಿದರು. ಮಾದಾರಪುರದ ರಂಗಸ್ವಾಮಿ, ಚಂದಕವಾಡಿ ಕೋಡಿಮೋಳೆಯ ಲಕ್ಷ್ಮಿ ಕೂಡ ತಮಗೆ ನಿವೇಶನ ದೊರಕಿಸಿಕೊಡಿ ಎಂದು ಮನವಿ ಮಾಡಿದರು. ಬದನಗುಪ್ಪೆಯ ಬಣ್ಣಾರಿ ತಮಗೆ ಹಕ್ಕು ಪತ್ರ ನೀಡಬೇಕೆಂದು ಕೋರಿದರು. ಒಬ್ಬರ ಬಳಿ ಇನ್ನೊಬ್ಬರು ನಿವೇಶನ ಮತ್ತು ಇ-ಸ್ವತ್ತು ಕೋರಿ ಮಾತನಾಡಿದರು. ಸಭೆಯಲ್ಲಿ ರಾಜ್ಯ ಸಾಯಿ ಕರ್ಮಚಾರಿ ಆಯೋಗದ ವಿಚಲಕ್ಷಣ ಸಮಿತಿ ಸದಸ್ಯ ಎಂ.ರಾಜೇಂದ್ರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಗಿರಿಧರ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೇಘನಾ, ಉಪ ತಹಸೀಲ್ದಾರ್ ಜಬೀನಾ ಬಾನು ಇದ್ದರು.