ನೀರಿನ ಬಾಟಲಿಗಿಲ್ಲ ಪೆಟ್ರೋಲ್, ಡೀಸೆಲ್

ಕ್ಯಾನ್ ಹಾಗೂ ಬಾಟಲಿಗೆ ಪೆಟ್ರೋಲ್, ಡೀಸೆಲ್ ಹಾಕುವುದಿಲ್ಲ ಎಂಬ ಫಲಕವನ್ನು ಯಳಂದೂರು ಪಟ್ಟಣದ ಖಾಸಗಿ ಪೆಟ್ರೋಲ್ ಬಂಕ್‌ನಲ್ಲಿ ಹಾಕಿರುವುದು.
ಕ್ಯಾನ್ ಹಾಗೂ ಬಾಟಲಿಗೆ ಪೆಟ್ರೋಲ್, ಡೀಸೆಲ್ ಹಾಕುವುದಿಲ್ಲ ಎಂಬ ಫಲಕವನ್ನು ಯಳಂದೂರು ಪಟ್ಟಣದ ಖಾಸಗಿ ಪೆಟ್ರೋಲ್ ಬಂಕ್‌ನಲ್ಲಿ ಹಾಕಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬಂಕ್‌ನಲ್ಲಿ ಫಲಕ ಅಳವಡಿಕೆ
ಯಳಂದೂರು: ಪಟ್ಟಣದಿಂದ ಯರಿಯೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿನ ಖಾಸಗಿ ಬಂಕ್‌ನಲ್ಲಿ ನೀರಿನ ಬಾಟಲಿ ಹಾಗೂ ಕ್ಯಾನ್‌ಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಹಾಕುವುದಿಲ್ಲ ಎಂಬ ಫಲಕ ಅಳವಡಿಸಲಾಗಿದೆ.
ಪಟ್ಟಣದ ಸಮೀಪದಲ್ಲೇ 3 ಪೆಟ್ರೋಲ್ ಬಂಕ್‌ಗಳಿದ್ದು, ಈ ಪೈಕಿ ಇಂಡಿಯನ್ ಆಯಿಲ್ ಬಂಕ್‌ನಲ್ಲಿ ಫಲಕ ಹಾಕಲಾಗಿದೆ. ಉಳಿದಂತೆ ಎರಡು ಹಾಗೂ ತಾಲೂಕಿನ ಬಂಕ್‌ಗಳಲ್ಲಿ ಈ ರೀತಿಯ ಫಲಕ ಹಾಕಿಲ್ಲ. ಆದರೆ ಕೆಲವು ಭಾಗಗಳಲ್ಲಿ ಇಂಧನ ಕೊರತೆ ಉಂಟಾಗಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಜನರು ಬಾಟಲಿಗಳಲ್ಲಿ ಇಂಧನ ಸಂಗ್ರಹಿಸುವ ಸಾಧ್ಯತೆ ಇದೆ. ಇದರಿಂದ ಕೃತಕ ಅಭಾವ ಸೃಷ್ಟಿಯಾಗಲಿದೆ ಎಂದು ಮುನ್ನೆಚ್ಚರಿಕಾ ಕ್ರಮವಾಗಿ ಫಲಕ ಹಾಕಲಾಗಿದೆ.
ದೇಶಾದ್ಯಂತ ಎಲ್ಲ ಪೆಟ್ರೋಲ್ ಪಂಪ್‌ಗಳಲ್ಲಿ ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿದೆ. ಆದರೆ ತಮಿಳುನಾಡಿನ ಒಂದು ಚಿಲ್ಲರೆ ಮಾರಾಟ ಮಳಿಗೆಯಲ್ಲಿ ಪೆಟ್ರೋಲ್ ಅನ್ನು ಸಡಿಲವಾದ ಪಾತ್ರೆಯಲ್ಲಿ ತೆಗೆದುಕೊಂಡು ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಇದು ಸುರಕ್ಷಿತವಲ್ಲ ಮತ್ತು ಸೂಕ್ತವಲ್ಲ ಎಂದು ಸೂಚಿಸಲಾಗಿದ್ದು, ಇದರಿಂದಾಗಿ ಫಲಕ ಅಳವಡಿಸಬಹುದು ಎಂದು ಬಂಕ್ ಸಿಬ್ಬಂದಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net