ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವ ಮತ್ತು ಕೋತಿಗಳು ಒಂದೇ ಆದ ಪ್ರೈಮೇಟ್ ವರ್ಗಕ್ಕೆ ಸೇರಿವೆ. ಚಿಂಪಾಜಿಗಳು ಅತಿ ಬುದ್ಧಿ ಹೊಂದಿದ್ದು ಮಾನವನ ನಂತರ ಸ್ಥಾನ ಪಡೆದಿವೆ. ಭಾರತದಲ್ಲಿ ಅದರ ಏಕೈಕ ಪ್ರಬೇಧವಾದ ಹೂಲಾಕ್ ಗಿಬ್ಬನ್ ಅಸ್ಸಾಂನಲ್ಲಿ ನೆಲೆಸಿದ್ದು ವಿನಾಶದಂಚಿನಲ್ಲಿವೆ. ಅಪರೂಪದ ವಾನರ ಪ್ರಬೇಧಗಳು ಈಶಾನ್ಯ ಭಾರತದಲ್ಲಿದ್ದು ಅವುಗಳಲ್ಲಿ ಅಸ್ಸಾಂ ಮಕಾಕ್, ಅರುಣಾಚಲ ಮಕಾಕ್, ಗೋಲ್ಡನ್ ಲಂಗೂರ, ಹಂಪ್ ನೋಸ್ಡ್, ಪಿಗ್ ಟೇಲ್‌ನಲ್ಲಿ ನೆಲೆಸಿವೆ ಎಂದರು. ಕರ್ನಾಟಕದಲ್ಲಿ ನೀಲಗಿರಿ ಲಂಗೂರ್ ಹಾಗೂ ಸಿಂಗಲೀಕ ವಿನಾಶದಂಚಿನಲ್ಲಿದ್ದು ಕೇವಲ 3,500 ಇವೆ. ಶಿವಮೊಗ್ಗದ ಸೋಮೇಶ್ವರ ವನ್ಯಜೀವಿಧಾಮ ದೇಶದ ಏಕೈಕ ಸಿಂಗಲೀಕ ವನ್ಯಜೀವಿ ಧಾಮವಾಗಿದೆ ಎಂದು ಮಾಹಿತಿ ನೀಡಿದರು.