ನೂತನ ಗ್ರಂಥಾಲಯದ ಅಗತ್ಯಗಳನ್ನು ಮುಖ್ಯ ಗ್ರಂಥಾಲಯ ಅಧಿಕಾರಿ ಶಿವಸ್ವಾಮಿ ಪಟ್ಟಿ ಮಾಡಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಮನವಿ ಸಲ್ಲಿಸಿದ್ದು, ಇದರ ಪ್ರಕಾರ, ಲೈಬ್ರರಿಗೆ 20 ಕಂಪ್ಯೂಟರ್, 2 ಲ್ಯಾಪ್‌ಟಾಪ್, ಸುತ್ತುಗೋಡೆ ನಿರ್ಮಾಣ, ಸಭಾಂಗಣದಲ್ಲಿ ಆಡಿಟೋರಿಯಂ, ಒಳಾಂಗಣದಲ್ಲಿ ನೆಲಹಾಸು, ಆಸನಗಳ ವ್ಯವಸ್ಥೆ, ಧ್ವನಿವರ್ಧಕ, ಪ್ರೊಜೆಕ್ಟರ್, ಪರದೆ, ದ್ವಿಚಕ್ರ ವಾಹನಗಳ ನಿಲುಗಡೆ ಸ್ಥಳ, ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಾಣ, ಧ್ವಜ ಸ್ಥಂಭ, ಉದ್ಯಾನ ನಿರ್ಮಾಣ, ಲ್‌ಟಿ ಬಳಕೆಗಾಗಿ ಜನರೇಟರ್ ಸೌಲಭ್ಯದ ಅಗತ್ಯವಿದೆ. ಇದಕ್ಕೆಲ್ಲ ಅಂದಾಜು 1 ಕೋಟಿ ರೂ.ಬೇಕಾಗುತ್ತದೆ. ಸೋಮವಾರ ಉದ್ಘಾಟನೆಯಾದ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡಿಸುವುದಾಗಿ ತಿಳಿಸಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ಉಳಿದ ಅವಶ್ಯಕತೆಗಳಿಗೂ ಅನುದಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.