ಮಣಗಳ್ಳಿ ಕೆರೆ ಅಭಿವೃದ್ಧಿಗೆ ಅಗತ್ಯ ಕ್ರಮ

ಬಂಡಳ್ಳಿ ಸಮೀಪದ ಮಣಗಳ್ಳಿ ಕೆರೆ ಪ್ರದೇಶಕ್ಕೆ ಶಾಸಕ ಎಂ.ಆರ್ ಮಂಜುನಾಥ್ ತೆರಳಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಕುಮಾರಸ್ವಾಮಿ, ಪ್ರತಾಪ್, ರವಿ, ತಮ್ಮಯ್ಯಗೌಡ ಇತರರಿದ್ದರು.
ಬಂಡಳ್ಳಿ ಸಮೀಪದ ಮಣಗಳ್ಳಿ ಕೆರೆ ಪ್ರದೇಶಕ್ಕೆ ಶಾಸಕ ಎಂ.ಆರ್ ಮಂಜುನಾಥ್ ತೆರಳಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಕುಮಾರಸ್ವಾಮಿ, ಪ್ರತಾಪ್, ರವಿ, ತಮ್ಮಯ್ಯಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ಆರ್.ಮಂಜುನಾಥ್ ಭರವಸೆ
ಹನೂರು: ಮಣಗಳ್ಳಿ ಕೆರೆಯಲ್ಲಿ ಸರ್ವೇ ಕಾರ್ಯ ಕೈಗೊಂಡು ಹೂಳು ತೆರವುಗೊಳಿಸುವುದರ ಮೂಲಕ ಅಭಿವೃದ್ಧಿಗೆ ಅಗತ್ಯ ಕ್ರಮವಹಿಸುವಂತೆ ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ತಾಲೂಕಿನ ಬಂಡಳ್ಳಿ ಸಮೀಪದ ಮಣಗಳ್ಳಿ ಕೆರೆಗೆ ಬುಧವಾರ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ತೆರಳಿ ಮಾಹಿತಿ ಪಡೆದು ಪರಿಶೀಲಿಸಿ ಮಾತನಾಡಿದರು. ಕ್ಷೇತ್ರದಲ್ಲಿ ಬೇಸಿಗೆ ಬಂತೆಂದರೆ ಅಂತರ್ಜಲ ಮಟ್ಟ ಕುಸಿತದಿಂದ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ. ಹಾಗಾಗಿ ನೀರಿನ ಮೂಲವಾದ ಕೆರೆಗಳನ್ನು ರಕ್ಷಿಸಿ ಅಭಿವೃದ್ಧಿ ಪಡಿಸುವುದು ಅಗತ್ಯವಾಗಿದೆ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಗೊಂಡು ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಹಾಗಾಗಿ ಹಿಂದಿನಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ 40 ಎಕರೆ ಪ್ರದೇಶದಲ್ಲಿನ ಮಣಗಳ್ಳಿ ಕೆರೆಯನ್ನು ಗ್ರಾಮಸ್ಥರ ಒತ್ತಾಯದ ಮೇರೆಗೆ ಅಭಿವೃದ್ಧಿಪಡಿಸಿ ನೀರು ಸಂಗ್ರಹಕ್ಕೆ ಅನುಕೂಲ ಕಲ್ಪಿಸುವುದು ಅಗತ್ಯವಾಗಿದೆ. ಆದ್ದರಿಂದ ಈ ಬಗ್ಗೆ ಮುತುವರ್ಜಿ ವಹಿಸಿ ಕೆರೆಯ ಸರ್ವೇ ಕಾರ್ಯ ನಡೆಸಿ ಗಡಿ ಗುರ್ತಿಸಬೇಕು. ಸಂಗ್ರಹವಾಗಿರುವ ಹೂಳನ್ನು ತೆರವುಗೊಳಿಸಬೇಕು. ಒಟ್ಟಿನಲ್ಲಿ ಕೆರೆಯು ಅಭಿವೃದ್ಧಿಯಾಗಬೇಕಿದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೂ ಮುನ್ನ ಮಣಗಳ್ಳಿ ಗ್ರಾಮದ ಬಡಾವಣೆಗೆ ತೆರಳಿದ ಶಾಸಕರು ಅಗತ್ಯ ಮೂಲ ಸೌಕರ್ಯ ಸಂಬಂಧ ಪರಿಶೀಲಿಸಿದರು. ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದರು.
ಭೂ ಮಾಪನ ಇಲಾಖೆಯ ಸರ್ವೇಯರ್ ಕುಮಾರಸ್ವಾಮಿ, ಸಣ್ಣ ನೀರಾವರಿ ಇಲಾಖೆಯ ಎಇಇ ಪ್ರತಾಪ್, ಮುಖಂಡರಾದ ಶಾಗ್ಯ ರವಿ, ತಮ್ಮಯ್ಯಗೌಡ, ಶಿವರಾಮೇಗೌಡ, ನಾಗಣ್ಣ, ತಿರುಪತಿ, ಶಿವನಪ್ಪ, ರಖೀಬ್ ಬಷರತ್ ನಾಗರಾಜು, ಅರವಿಂದ, ಶಿವಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net