ವೀರ ವನಿತೆಯ ಸಮಯ ಪ್ರಜ್ಞೆ ಮಹಿಳೆಯರಿಗೆ ಪ್ರೇರಣೆ

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಎಂಎಲ್ಸಿ ಸಿ.ಎನ್.ಮಂಜೇಗೌಡ ಒನಕೆ ಓಬವ್ವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಡಾ.ಎಂ.ಡಿ.ಸುದರ್ಶನ್, ಎಂ.ಚಂದ್ರಶೇಖರ್, ಸುಶಂಕರ್ ಇದ್ದರು.

Published on
ಮೈಸೂರು: ವೀರ ವನಿತೆ ಒನಕೆ ಓಬವ್ವ ಅವರ ಶೌರ್ಯ, ಸಮಯ ಪ್ರಜ್ಞೆ ಹಾಗೂ ದೇಶ ಪ್ರಜ್ಞೆ ಇಂದಿಗೂ ಮಹಿಳೆಯರಿಗೆ ಪ್ರೇರಣೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿಯನ್ನು ಉದ್ಘಾಟಸಿ ಮಾತನಾಡಿ, ಒನಕೆ ಓಬವ್ವ ಅವರ ಆತ್ಮಸ್ಥೈರ್ಯ, ದೇಶಭಕ್ತಿಯ ಬೆಳಕು ನಮ್ಮಲ್ಲಿ ಸದಾ ಬೆಳಗಬೇಕು. ಅವರ ಕೊಡುಗೆ ಇಂದಿಗೂ ಸಹ ಶ್ಲಾಘನೀಯವಾದದ್ದು, ಇಂತಹ ವೀರ ಮಹಿಳೆಯರು ಎಲ್ಲ ಮಹಿಳೆಯರಿಗೆ ಮಾದರಿ. ಎಲ್ಲ ರಂಗದಲ್ಲಿಯೂ ಹೆಣ್ಣು ಮಕ್ಕಳು ಭಾಗವಹಿಸುವುದರ ಜತೆಗೆ ಸಮಾಜವನ್ನು ತಿದ್ದುವಂತಹ ಶಕ್ತಿಯನ್ನು ಮಹಿಳೆಯರು ಹೊಂದಿದ್ದಾರೆ ಎಂದು ತಿಳಿಸಿದರು.
ಶ್ರೀ ಧರ್ಮಸ್ಥಳ ಮಂಜುನಾಥ ಮಹಿಳಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ವಿನೋದಾ ಮಾತನಾಡಿ, ಗಂಡು ಮೆಟ್ಟಿದ ನಾಡು ಚಿತ್ರದುರ್ಗ ಕೋಟೆಯನ್ನು ಜಗತ್ತಿಗೆ ಅಜರಾಮರವಾಗಿಸಿದ ಒನಕೆ ಓಬವ್ವ ಅವರ ಹೋರಾಟ, ಸಮಯ ಪ್ರಜ್ಞೆ ನಮಗೆಲ್ಲರಿಗೂ ನಿಜಕ್ಕೂ ಪ್ರೇರಣೆಯಾಗಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ.ಸುದರ್ಶನ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎಂ.ಚಂದ್ರಶೇಖರ್, ಕನ್ನಡ ಪರ ಹೋರಾಟಗಾರರಾದ ಸುಶಂಕರ್  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net