ಸರ್ವರೋಗಕ್ಕೂ ಸಂಗೀತವೇ ಮದ್ದು

 ಚಾಮರಾಜನಗರದ ವರನಟ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ  ಐಸಿರಿ ಮೆಲೋಡಿಸ್ ವತಿಯಿಂದ ಆಯೋಜಿಸಿದ್ದ ಇಂಚರ ಗಾನೋತ್ಸವ ಸೀಸನ್ ಕಾರ್ಯಕ್ರಮದಲ್ಲಿ ಉಮ್ಮತ್ತೂರು ಇಂದುಶೇಖರ್ ಮಾತನಾಡಿದರು. ಸುರೇಶ್ ಋಗ್ವೇದಿ, ರೂಪಾಶ್ರೀ, ಜಗದೀಶ್, ದೀಪಾ ಪಾಟೀಲ್, ರುಕ್ಮಿಣೀ, ಕೃಷ್ಣ ಇತರರಿದ್ದರು.
ಚಾಮರಾಜನಗರದ ವರನಟ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಐಸಿರಿ ಮೆಲೋಡಿಸ್ ವತಿಯಿಂದ ಆಯೋಜಿಸಿದ್ದ ಇಂಚರ ಗಾನೋತ್ಸವ ಸೀಸನ್ ಕಾರ್ಯಕ್ರಮದಲ್ಲಿ ಉಮ್ಮತ್ತೂರು ಇಂದುಶೇಖರ್ ಮಾತನಾಡಿದರು. ಸುರೇಶ್ ಋಗ್ವೇದಿ, ರೂಪಾಶ್ರೀ, ಜಗದೀಶ್, ದೀಪಾ ಪಾಟೀಲ್, ರುಕ್ಮಿಣೀ, ಕೃಷ್ಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅಭಿಮತ
  • ಇಂಚರ ಗಾನೋತ್ಸವ ಸೀಸನ್ ಕಾರ್ಯಕ್ರಮ
ಚಾಮರಾಜನಗರ: ಮಧುರ ಗೀತೆಗಳನ್ನು ಕೇಳುವುದರಿಂದ ಸಂತೋಷ ಹೆಚ್ಚಾಗುತ್ತದೆ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಹೇಳಿದರು.
ನಗರದಲ್ಲಿ ವರನಟ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಐಸಿರಿ ಮೆಲೋಡಿಸ್ ವತಿಯಿಂದ ಭಾನುವಾರ ಆಯೋಜಿಸಿದ್ದ ಇಂಚರ ಗಾನೋತ್ಸವ ಸೀಸನ್ ಕಾರ್ಯಕ್ರಮದಲ್ಲಿ ಮಾತನಾಡಿ, ಗಾನೋತ್ಸವದ ಮೂಲಕ ರಾಜ್ಯದ ಹಲವು ಕಲಾವಿದರಿಗೆ ವೇದಿಕೆ ನೀಡಲಾಗಿದೆ. ಸಂಗೀತದ ಮೂಲಕ ಸರ್ವಶಾಂತಿ ಪಡೆಯಬಹುದಾಗಿದ್ದು, ಸರ್ವರೋಗಕ್ಕೂ ಸಂಗೀತವೇ ಮದ್ದು ಎಂದರು.
ಪ್ರಸಿದ್ಧ ಗಾಯಕರಿಂದ ಉತ್ತಮ ಸುಮಧುರ ಕನ್ನಡ ಚಲನ ಚಿತ್ರಗೀತೆಗಳ ಕರೋಕೆ ಕಾರ್ಯಕ್ರಮ ಏರ್ಪಡಿಸಿ ಕಲಾವಿದರು ಹಾಗೂ ಕೇಳುಗರ ಮನಸ್ಸು ಸಂತೋಷಪಡಿಸುವ ಕಾರ್ಯ ಇದಾಗಿದೆ. ಸಂಗೀತ ಮನಸ್ಸಿಗೆ ಆನಂದ ನೀಡುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಸುರೇಶ್ ಋಗ್ವೇದಿ ಮಾತನಾಡಿ, ಮಾನವನಿಗೆ ಸಂಗೀತ ಆನಂದಮಯವನ್ನು ತರುತ್ತದೆ. ಇಂಚರ ಗಾನೋತ್ಸವದ ಮೂಲಕ ಗಾಯನದ ಹಬ್ಬವನ್ನು ಚಾಮರಾಜನಗರದಲ್ಲಿ ರೂಪಿಸಿದ ಉಮ್ಮತೂರು ಇಂದುಶೇಖರ್ ಅವರಿಗೆ ಧನ್ಯವಾದಗಳು ಎಂದು ಹೇಳಿದರು.
ರಾಜ್ಯದ ವಿವಿಧ ಕಲಾವಿದರನ್ನು ಚಾಮರಾಜನಗರಕ್ಕೆ ಆಹ್ವಾನಿಸಿ ಸುಮಧುರವಾದ ಸಂಗೀತ ಗಾಯನವನ್ನು ನಡೆಸಿಕೊಟ್ಟ ಎಲ್ಲ ಗಾಯಕರಿಗೆ ಅಭಿನಂದನೆ. ಮುಂದಿನ ದಿನಗಳಲ್ಲಿ ಇಂಚರ ಗಾನೋತ್ಸವದ ಮೂಲಕ ಮಕ್ಕಳ ಗಾಯನ ಕಾರ್ಯಕ್ರಮವನ್ನು ರೂಪಿಸಿ ಭವಿಷ್ಯದ ಕಲಾವಿದರನ್ನು ರೂಪಿಸುವ ಜವಾಬ್ದಾರಿಯನ್ನು ಇಂದುಶೇಖರ್ ಅವರು ವಹಿಸಿಕೊಳ್ಳಲಿ ಎಂದು ಮನವಿ ಮಾಡಿದರು.
ಕನ್ನಡ ಭಾಷೆಯ ಸಾವಿರಾರು ಹಾಡುಗಳು ಜಗತ್ಪ್ರಸಿದ್ಧವಾಗಿದೆ. ನೂರಾರು ವರ್ಷಗಳ ಸುಮಧುರವಾದ ಕನ್ನಡದ ಹಾಡುಗಳು ಪ್ರತಿಯೊಬ್ಬ ಕನ್ನಡಿಗನ ನಾಲಿಗೆಯಲ್ಲಿ ಸದಾ ಕಾಲ ಪ್ರತಿಧ್ವನಿಸುತ್ತ ನೆಮ್ಮದಿ ವಾತಾವರಣವನ್ನು ಸೃಷ್ಟಿ ಮಾಡಿದೆ. ಸಾಹಿತ್ಯ, ಸಂಗೀತ ಗಾಯನದ ಮೂಲಕ ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಸದಾ ಕಾಲ ಉಳಿಸಿದ ಕೀರ್ತಿ ಕಲಾವಿದರಿಗೆ ಸಲ್ಲುತ್ತದೆ ಎಂದರು.
ಗಾಯಕರಾದ ಪಿ.ಬಿ.ಶ್ರೀನಿವಾಸ್, ಎಸ್‌ಪಿ ಬಾಲಸುಬ್ರಹ್ಮಣ್ಯ, ಜಾನಕಿ, ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಡಾ ಅಂಬರೀಷ್, ಶಂಕರ್‌ನಾಗ್, ಡಾ.ಪುನೀತ್ ರಾಜಕುಮಾರ್ ಮುಂತಾದವರ ಗೀತೆಗಳ ಗಾಯನ ಗಮನ ಸೆಳೆಯಿತು. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್. ಸ್ವಾಮಿ, ನಿವೃತ್ತ ಪ್ರಾಂಶುಪಾಲ ಎನ್. ನಾಗರಾಜು, ಜನಪದ ಗಾಯಕ ಸುರೇಶ್ ನಾಗರದನಹಳ್ಳಿ, ಮುಖಂಡರಾದ ಆಲೂರು ಮಲ್ಲು, ಕೂಸಣ್ಣ ಕರಿ ನಂಜನಪುರ, ಆನಂದ ಭಗೀರಥ, ಪುಟ್ಟುವರ್ಧನ್, ಡಾ ಸುಗಂಧರಾಜ್,ಐಸಿರಿ ಸುರೇಶ್, ಲೋಕಾಯುಕ್ತ ಗುರುಶಾಂತು, ಜಯಜಾಗೃತಿ, ಎ.ಎಸ್ ಐ ಮಹದೇವಪ್ಪ, ಹರಿಪ್ರಸಾದ್, ಜಗದೀಶ್, ರೂಪಾಶ್ರೀ, ಮಹದೇವಸ್ವಾಮಿ, ಕೋಮಲಾ ಕಠಾರಿ, ದೀಪಾ ಪಾಟೀಲ್, ರುಕ್ಮಿಣಿ, ಕೃಷ್ಣ, ಅನ್ನಪೂರ್ಣ ವಿ.ಗೋವಿಂದರಾಜು, ಪ್ರಾರ್ಥನಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net