ನಗರಸಭೆ ವ್ಯಾಪ್ತಿಯ ಸೋಮವಾರಪೇಟೆ, ಬುದ್ಧನಗರ, ಡಾ.ಅಂಬೇಡ್ಕರ್ ಬಡಾವಣೆ, ರಾಮಸಮುದ್ರ ಬಡಾವಣೆ, ಇತರ ಬಡಾವಣೆಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡಿ ಸುಮಾರು 15 ದಿನಗಳೇ ಕಳೆದಿದ್ದು, ನಿವಾಸಿಗಳು ನಿತ್ಯವೂ ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಹಲವು ವಾರ್ಡ್‌ಗಳಲ್ಲಿ ಕಾವೇರಿ ನೀರು ಪೂರೈಕೆಯಾಗದೆ ಜನರು ತೊಂದರೆ ಅನುಭವಿಸುವಂತಾಗಿದೆ.