ಕಳೆದ 10 ದಿನದ ಹಿಂದೆ ತಾಲೂಕಿನ ಪೊನ್ನಾಚಿ ಹಾಗೂ ಮಾರ್ಟಳ್ಳಿ, ಹೂಗ್ಯಂ ಈ ಭಾಗದ ಇನ್ನಿತರೆ ಕಡೆಗಳಲ್ಲಿ ಉತ್ತಮ ಮಳೆಯಾಗಿತ್ತು. ಹಳ್ಳಕೊಳ್ಳಗಳಲ್ಲಿ ನೀರು ಹರಿದಿತ್ತು. ಆದರೆ ಹನೂರು ಭಾಗದಲ್ಲಿ ಕಳೆದ 15 ದಿನಗಳಿಂದ ಮಳೆಯಾಗಿರಲಿಲ್ಲ. ಕಳೆದ ವಾರದಿಂದ ಗಾಳಿಯ ವೇಗ ಹೆಚ್ಚಾಗಿತ್ತು. ಶುಕ್ರವಾರ ಬೆಳಗ್ಗೆಯಿಂದಲೇ ಈ ಭಾಗದಲ್ಲಿ ಮೋಡ ಕವಿದ ವಾತವರಣವಿತ್ತು. ಮಧ್ಯಾಹ್ನ 3ಗಂಟೆಗೆ ಹನೂರು ಪಟ್ಟಣ ಸೇರಿದಂತೆ ಮಂಗಲ, ಗುಂಡಾಪುರ, ಚಿಂಚಳ್ಳಿ, ಭೈರನತ್ತ, ಚಂಗವಾಡಿ ಹಾಗೂ ಈ ಭಾಗದ ಇನ್ನಿತರೆ ಕಡೆಗಳಲ್ಲಿ ಆರಂಭವಾದ ಸಾಧಾರಣ ಮಳೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು.