ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ದತ್ತೇಶ್‌ಕುಮಾರ್ ಮಾತನಾಡಿ, ಚಾಮರಾಜನಗರ ಜಿಲ್ಲೆಗೆ ಬಂದರೆ ಶಾಪ, ಮಾಟಕ್ಕೆ ಪ್ರಸಿದ್ಧಿ ಕೊಳ್ಳೇಗಾಲ ಎಂಬ ಅಪಖ್ಯಾತಿಯನ್ನು ಹೊರೆಸಲಾಗುತ್ತಿದೆ. ನಮ್ಮ ಜಿಲ್ಲೆ ಶ್ರೀ ಮಲೆ ಮಹದೇಶ್ವರ, ಶ್ರೀ ಮಂಟೇಸ್ವಾಮಿ ಇನ್ನಿತರ ಮಹಾಪುರುಷರು ನೆಲೆಗೊಂಡಿರುವ ಪವಿತ್ರ ಸ್ಥಳವಾಗಿದೆ. ಯುವ ಜನರು ಭ್ರಷ್ಟಾಚಾರಕ್ಕೆ ಮುಳುಗಿ ಹೋಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವುದು ವಿದ್ಯಾರ್ಥಿಗಳ ಕೈಯಲ್ಲಿದೆ. 30 ವರ್ಷಗಳಿಂದ ಮಾನಸ ಶಿಕ್ಷಣ ಸಂಸ್ಥೆ ಶೈಕ್ಷಣಿಕ ಸೇವೆ ನೀಡುತ್ತಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ವಿವಿಧ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸುತ್ತಿರುವುದು ನಮ್ಮ ಹೆಮ್ಮೆ ಎಂದು ಹೇಳಿದರು.