ಚಾಮರಾಜನಗರ ನಗರಸಭೆ ವ್ಯಾಪ್ತಿಯ ಬಡಾವಣೆಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ಕುಡಿಯುವ ನೀರು, ರಸ್ತೆ, ಚರಂಡಿಸಮಸ್ಯೆ ಪರಿಶೀಲಿಸಿದರು. ಮುಖಂಡರಾದ ಮಹದೇವಸ್ವಾಮಿ, ಮಹೇಶ್, ಸ್ವಾಮಿ ರಾಜು ಇತರರು ಹಾಜರಿದ್ದರು.
ಚಾಮರಾಜನಗರ: ನಗರಸಭೆ ವ್ಯಾಪ್ತಿಯ ರಾಮಸಮುದ್ರದ ದೊಡ್ಡ ಬೀದಿ, ಚಿಕ್ಕಬೀದಿ, ಕುರುಬರ ಬೀದಿ, ಹೌಸಿಂಗ್ ಬೋರ್ಡ್ ಕಾಲನಿ, ಗಾಳೀಪುರ 2ನೇ ವಾರ್ಡ್, 3ನೇವಾರ್ಡ್‌ಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ಕುಡಿಯುವ ನೀರು, ರಸ್ತೆ, ಚರಂಡಿ ಸಮಸ್ಯೆ ಕುರಿತಂತೆ ವಾರ್ಡ್ ನಿವಾಸಿಗಳಿಂದ ಅಹವಾಲು ಸ್ವೀಕರಿಸಿದರು.
ಇದೇ ವೇಳೆ ಮಾತನಾಡಿ ಅವರು, ಬೇಸಿಗೆ ಆರಂಭವಾಗಿದ್ದು, ಅಂತರ್ಜಲ ಕುಸಿತದ ಹಿನ್ನೆಲೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ಅಂತರ್ಜಲ ಪರೀಕ್ಷಕರನ್ನು ಕರೆಸಿ, ಪಾಯಿಂಟ್ ಮಾಡಿಸಬೇಕು, ನೀರು ಸಿಗುವ ಕಡೆ ತುರ್ತಾಗಿ ಕೊಳವೆ ಬಾವಿ ಕೊರೆಸಿ, ಪೈಪ್‌ಲೈನ್ ಕಾಮಗಾರಿ ಕೈಗೊಂಡು, ಜನರಿಗೆ ನೀರು ಕೊಡಬೇಕು, ಇದರ ಜತೆಗೆ ಹಳೇ ಕೊಳವೆ ಬಾವಿಗಳನ್ನು ಪುನಶ್ವೇತನಗೊಳಿಸಿ, ನೀರುಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಅಭಿವೃದ್ದಿಗೆ ಸಂಬಂಧಿಸಿದಂತೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಪ್ರತಿಕ್ರಿಯಿಸಿ, ಒಳಚರಂಡಿ ಕಾಮಗಾರಿ ಮುಗಿದಿರುವ ಕಡೆ ರಸ್ತೆ ಅಭಿವೃದ್ದಿಗೆ ಕ್ರಮವಹಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ರಾಮಸಮುದ್ರದ ಚಿಕ್ಕಬೀದಿ ನಿವಾಸಿಗಳು ತಮ್ಮ ವಾರ್ಡಿನಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಿಕೊಡಬೇಕು, ದೊಡ್ಡಬೀದಿ ನಿವಾಸಿಗಳು ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿಗೆ ಸರ್ಕಾರದಿಂದ ಹಣಮಂಜೂರು ಮಾಡಿಸಿಕೊಡಬೇಕು, ಬುದ್ದನಗರದಲ್ಲಿ ಹೊಸದಾಗಿ ಸುಸಜ್ಜಿತ ಗ್ರಂಥಾಲಯ ನಿರ್ಮಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಮುಖಂಡರಾದ ಚೂಡಾ ಮಾಜಿ ಅಧ್ಯಕ್ಷ ಸೈಯದ್‌ರಫೀ, ಜಿ,ಪಂ ಕೆ,ಡಿ,ಪಿ ಸದಸ್ಯ ಸೈಯದ್ ಮುಸಾಯಿದ್ ಮಾಜಿ ನಗರಸಭಾ ಸದಸ್ಯರಾದ ನಾಗರಾಜು, ಬಸವರಾಜು, ಆರ್.ಎಂ.ರಾಜಪ್ಪ, ಜಿಲ್ಲಾ ಜನಹಿತಾಶಕ್ತಿ ಹೋರಾಟ ಸಮಿತಿ ಅಧ್ಯಕ್ಷ ರಾಮಸಮುದ್ರ ಸುರೇಶ್, ಮಹದೇವಸ್ವಾಮಿ, ಮಹೇಶ್,, ಸ್ವಾಮಿ, , ನಗರಸಭೆ ಜೆಇ ರಾಜು ಇದ್ದರು.