ಶಾಸಕ ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಿ, ಉಪ್ಪಾರ ಸಮಾಜದಿಂದ ಒಕ್ಕೋರಲ ಆಗ್ರಹ

ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಉಪ್ಪಾರ ಸಮಾಜದ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ಜಿಲ್ಲಾ ಉಪ್ಪಾರ ಸೇವಾ ಸಂಘದ ಅಧ್ಯಕ್ಷ ಜಕ್ಕಪ್ಪ ಸು ಯಡವೆ, ಮುಖಂಡರಾದ ಮಹಾಲಿಂಗ ಉಪ್ಪಾರ, ಸಹದೇವ ಬೆಳಗಲಿ ಇತರರಿದ್ದಾರೆ.
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಉಪ್ಪಾರ ಸಮಾಜದ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ಜಿಲ್ಲಾ ಉಪ್ಪಾರ ಸೇವಾ ಸಂಘದ ಅಧ್ಯಕ್ಷ ಜಕ್ಕಪ್ಪ ಸು ಯಡವೆ, ಮುಖಂಡರಾದ ಮಹಾಲಿಂಗ ಉಪ್ಪಾರ, ಸಹದೇವ ಬೆಳಗಲಿ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರಕ್ಕೆ ಒತ್ತಾಯ
  • ಕಾಂಗ್ರೆಸ್ ವರಿಷ್ಠರಿಗೆ ಮನವಿ
  • ಸಣ್ಣ ಸಮುದಾಯಕ್ಕೆ ಆದ್ಯತೆ ನೀಡಿ
ವಿಜಯಪುರ: ಚಾಮರಾಜ ನಗರ ಕ್ಷೇತ್ರದ ಹಿರಿಯ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ವಿಜಯಪುರ ಜಿಲ್ಲಾ ಉಪ್ಪಾರ ಸಮಾಜದ ಮುಖಂಡರು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಉಪ್ಪಾರ ಸೇವಾ ಸಂಘದ ಅಧ್ಯಕ್ಷ ಜಕ್ಕಪ್ಪ ಸು. ಯಡವೆ ಅವರು, ಕರ್ನಾಟಕದಲ್ಲಿ ಸುಮಾರು 40 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಇಡೀ ರಾಜ್ಯದಲ್ಲಿ ನಮ್ಮ ಸಮಾಜದಿಂದ ಆಯ್ಕೆಯಾಗಿರುವ ಏಕೈಕ ಶಾಸಕರು ಪುಟ್ಟರಂಗಶೆಟ್ಟಿ ಅವರು. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಿ ಎಂದರು.
ಪುಟ್ಟರಂಗಶೆಟ್ಟಿ ಅವರು ಚಾಮರಾಜ ನಗರ ಕ್ಷೇತ್ರದಿಂದ ಸತತ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಾಜ್ಯದ ಸುಮಾರು 36 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ್ಪಾರ ಸಮಾಜ ನಿರ್ಣಾಯಕ ಮತದಾರರಾಗಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ ಎಂದು ಮುಖಂಡರು ತಿಳಿಸಿದರು.
ಸಮಾಜವನ್ನು ರಾಜಕೀಯವಾಗಿ ಮುಖ್ಯವಾಹಿನಿಗೆ ತರಲು ಮತ್ತು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನೀಡಿದ ಬೆಂಬಲಕ್ಕೆ ನ್ಯಾಯ ಒದಗಿಸಲು ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.
ಕೆಪಿಸಿಸಿ ಒಬಿಸಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಉಪ್ಪಾರ, ಸಹದೇವ ಬೆಳಗಲಿ, ಸಿದ್ದರಾಯ ಗುನ್ನಗಿ, ಸಿದ್ದು ಗೇರಡೆ, ಅನಿಲ ಅವಳಿ, ಶ್ರೀನಿವಾಸ ಅಂಬಲಿ, ಯಲ್ಲಪ್ಪ ಬಂಡಿ, ಭೀಮಣ್ಣಾ ಉಪ್ಪಾರ, ಬಸು ಖಂಡೇಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net