ಕ್ರೀಡಾಪಟುವಿನ ವಿದೇಶ ಪ್ರವಾಸಕ್ಕೆ ನೆರವಾದ ಶಾಸಕ

ಮಲೇಶಿಯದಲ್ಲಿ ನಡೆಯಲಿರುವ ಪ್ರಿಸ್ಬಿ ಕ್ರೀಡಾ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿನಿಯನ್ನು ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಮೈಸೂರಿನ ತಮ್ಮ ನಿವಾಸದಲ್ಲಿ ಅಭಿನಂದಿಸಿದರು.
ಮಲೇಶಿಯದಲ್ಲಿ ನಡೆಯಲಿರುವ ಪ್ರಿಸ್ಬಿ ಕ್ರೀಡಾ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿನಿಯನ್ನು ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಮೈಸೂರಿನ ತಮ್ಮ ನಿವಾಸದಲ್ಲಿ ಅಭಿನಂದಿಸಿದರು.
Published on
ಗುಂಡ್ಲುಪೇಟೆ: ಮಲೇಶಿಯದಲ್ಲಿ ನಡೆಯಲಿರುವ ಪ್ರಿಸ್ಬಿ ಕ್ರೀಡೆ ಭಾರತ ತಂಡದ ಆಟಗಾರ್ತಿಯಾಗಿ ಆಯ್ಕೆಯಾಗಿರುವ ವಿದ್ಯಾರ್ಥಿನಿಯನ್ನು ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಮೈಸೂರಿನ ತಮ್ಮ ನಿವಾಸದಲ್ಲಿ ಅಭಿನಂದಿಸಿ, ವಿಮಾನ ಪ್ರಯಾಣದ ಖರ್ಚು ಭರಿಸಿದರು.
ಶಿಂಡನಪುರ ಗ್ರಾಮದ ರೈತ ಕುಟುಂಬದ ಸಂಧ್ಯಾ ಮಲೇಶಿಯದಲ್ಲಿ ನಡೆಯಲಿರುವ ಪ್ರಿಸ್ಬಿ ಕ್ರೀಡೆಗೆ ಭಾರತ ತಂಡದ ಆಟಗಾರರಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದಾಳೆ. ವಿದ್ಯಾರ್ಥಿನಿಯ ಸಾಧನೆ ನಮ್ಮೆಲ್ಲರ ಹೆಮ್ಮೆಯ ವಿಚಾರ. ನಮ್ಮ ತಾಲೂಕಿನ ಮನೆ ಮಗಳಾದ ಸಂಧ್ಯಾ ವಿದೇಶದಲ್ಲೂ ತನ್ನ ಪ್ರತಿಭೆ ಪ್ರದರ್ಶಿಸಲಿ ಎಂದು ಹಾರೈಸಿದರು.
ರೈತರ ಮಗಳು ಕ್ರೀಡೆಯಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ತೆರಳುತ್ತಿರುವುದರಿಂದ ಸ್ವ ಪ್ರೇರಣೆಯಿಂದ ವಿಮಾನ ಪ್ರಯಾಣದ ಖರ್ಚು ಭರಿಸಿದ್ದೇನೆ ಎಂದು ತಿಳಿಸಿದರು. ಕ್ರೀಡಾಪಟು ಉತ್ತಮ ಸಾಧನೆ ಮಾಡಲಿ ಎಂದು ಹಾರೈಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net