ಬಸವಜಯಂತಿ ಆಚರಣೆ ಪೂರ್ವಸಿದ್ಧತಾ ಸಭೆ

ಗುಂಡ್ಲುಪೇಟೆ ಪಟ್ಟಣದ ಜೆಎಸ್‌ಎಸ್ ಕಲಾಭವನದಲ್ಲಿ ಬಸವಜಯಂತಿ ಆಚರಣೆ ಅಂಗವಾಗಿ ವೀರಶೈವ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಗಣೇಶ್ ಪ್ರಸಾದ್, ನಿರಂಜನಕುಮಾರ್, ಶ್ರೀ ಸಿದ್ದಮಲ್ಲಸ್ವಾಮೀಜಿ, ಶ್ರೀ ಶಿವಲಿಂಗೇಂದ್ರಸ್ವಾಮೀಜಿ, ಇಮ್ಮಡಿ ಶ್ರೀ ಉದ್ದಾನೇಶ್ವರಸ್ವಾಮೀಜಿ, ಶ್ರೀ ಗುರು ಸಿದ್ದಸ್ವಾಮೀಜಿ, ಶ್ರೀ ಷಡಕ್ಷರಸ್ವಾಮೀಜಿ, ರವಿ ಇದ್ದರು.

Published on
ಗುಂಡ್ಲುಪೇಟೆ : ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದಲೇ ಸಿದ್ದಗಂಗಾ ಶ್ರೀ ಮತ್ತು ಬಸವೇಶ್ವರರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಪಟ್ಟಣದ ಜೆಎಸ್‌ಎಸ್ ಕಲಾಭವನದಲ್ಲಿ ಬಸವಜಯಂತಿ ಆಚರಣೆ ಅಂಗವಾಗಿ ಮಂಗಳವಾರ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿ ಶ್ರೀ ಸುತ್ತೂರು ಶ್ರೀಗಳ ಜಯಂತಿಯನ್ನೂ ಅದ್ದೂರಿಯಾಗಿ ತಾಲೂಕಿನಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಅನುದಾನ ಕೊಡಿಸುವೆ: ಪಟ್ಟಣದಲ್ಲಿ ಬಸವಭವನ ನಿರ್ಮಾಣ ಮಾಡಲು ಒಗ್ಗಟ್ಟಾಗಿ ಜನಾಂಗದವರಿಂದ ಸಹಾಯಧನ ಸಂಗ್ರಹ ಮಾಡಬೇಕು. ನಾನೂ ಸರ್ಕಾರದ ಮಟ್ಟದಲ್ಲಿ ಅನುದಾನ ಕೊಡಿಸುವೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಸೋಮಹಳ್ಳಿ ಮಠಾಧ್ಯಕ್ಷರಾದ ಸಿದ್ದಮಲ್ಲಸ್ವಾಮೀಜಿ, ಪಡಗೂರು ಅಡವಿಮಠದ ಶಿವಲಿಂಗೇಂದ್ರಸ್ವಾಮೀಜಿ, ಮೂಡಗೂರು ಮಠದ ಇಮ್ಮಡಿ ಉದ್ದಾನೇಶ್ವರಸ್ವಾಮೀಜಿ, ಕಬ್ಬಹಳ್ಳಿಯ ಗುರುಸಿದ್ದಸ್ವಾಮೀಜಿ, ಹಂಗಳ ಮಠದ ಷಡಕ್ಷರಸ್ವಾಮೀಜಿ, ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್, ಮಹಾಸಭಾ ತಾಲೂಕು ಅಧ್ಯಕ್ಷ ರವಿ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಮಲೆಮಹದೇಶ್ವರ ಬೆಟ್ಟದ ಧರ್ಮದರ್ಶಿ ಮಂಡಲಿಯ ಮಾಜಿ ಅಧ್ಯಕ್ಷ ಡಿ.ಎಸ್.ಸಿದ್ದಪ್ಪ, ಜಿಲ್ಲಾಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಮಹದೇವಪ್ಪ, ನಿವೃತ್ತ ಶಿಕ್ಷಕರಾದ ಟಿ.ಎನ್.ನಾಗಮಲ್ಲಪ್ಪ, ಶಿವಬಸಪ್ಪ ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net