ಎಂಡಿಎನ್ ಚಿಂತನೆ ರೈತರಿಗೆ ಸ್ಫೂರ್ತಿದಾಯಕ

ವಡಕೆಹಳ್ಳದಲ್ಲಿ ಅಹೋರಾತ್ರಿ ಧರಣಿಯಲ್ಲಿ ನಿತರರಾಗಿರುವ ರೈತರು ಪ್ರೊ.ಎಂ.ಡಿ ನಂಜುಂಡಸ್ವಾಮಿ ಅವರ ಪುಣ್ಯಸ್ಮರಣೆ ಹಿನ್ನಲೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅರ್ಪುದರಾಜ್, ಪುಟ್ಟಸ್ವಾಮಿ, ಪೀಟರ್ ಇತರರಿದ್ದರು.
ವಡಕೆಹಳ್ಳದಲ್ಲಿ ಅಹೋರಾತ್ರಿ ಧರಣಿಯಲ್ಲಿ ನಿತರರಾಗಿರುವ ರೈತರು ಪ್ರೊ.ಎಂ.ಡಿ ನಂಜುಂಡಸ್ವಾಮಿ ಅವರ ಪುಣ್ಯಸ್ಮರಣೆ ಹಿನ್ನಲೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅರ್ಪುದರಾಜ್, ಪುಟ್ಟಸ್ವಾಮಿ, ಪೀಟರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • farmers
  • mdn
  • Prof. M.D. Nanjundaswamy
ಹನೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ರೈತರಿಗೆ ಅರಿವು ಹಾಗೂ ಆತ್ಮಗೌರವವನ್ನು ತಂದು ಕೊಟ್ಟ ನಂಜುಂಡಸ್ವಾಮಿ ಅವರ ಚಿಂತನೆ, ಆದರ್ಶ ರೈತಾಪಿ ವರ್ಗಕ್ಕೆ ಸ್ಫೂರ್ತಿದಾಯಕ. ಆದ್ದರಿಂದ ಪ್ರತಿಯೊಬ್ಬರೂ ಅವರ ಚಿಂತನೆಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಅರ್ಪುದರಾಜ್ ತಿಳಿಸಿದರು.
ವಡಕೆಹಳ್ಳಕ್ಕೆ ಏತ ನೀರಾವರಿ ಯೋಜನೆಯನ್ನು ರೂಪಿಸುವಂತೆ ಕಳೆದ 100 ದಿನಗಳಿಂದಲೂ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸ್ಥಳದಲ್ಲಿ ಪ್ರೊ.ಎಂ.ಡಿ ನಂಜುಂಡಸ್ವಾಮಿ ಅವರ 22ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಧರಣಿ ಕೈಗೊಂಡು 100 ದಿನ ಕಳೆದರೂ ಏತ ನೀರಾವರಿ ಯೋಜನೆಯನ್ನು ರೂಪಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಪುಟ್ಟಸ್ವಾಮಿ, ಮಾಣಿಕ್ಯಂ, ಪೀಟರ್, ಪೌಲ್ ಧರ್ಮರಾಜ್, ಸೂಸೈರಾಜ್, ಜೋಸೆಫ್ ಮಾದಮ್ಮಾಳ್ ಹಾಗೂ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net