ಅವಿರೋಧವಾಗಿ ಆಯ್ಕೆಯಾದ ನೂತನ ನಿರ್ದೇಶಕರಾದ ಜೆ.ಯೋಗೇಶ್, ಗೌಡಹಳ್ಳಿ ಎಸ್. ರವಿ, ಪುಟ್ಟಚಾಮಮ್ಮ, ಮಹದೇವಮ್ಮ, ಮಹೇಶ್, ಸಿ.ನಂಜುಂಡಸ್ವಾಮಿ, ವೈ.ಎನ್.ಚೇತನ್, ಬಿ.ಪರಶಿವಮೂರ್ತಿ, ಸಿ.ಪುಟ್ಟರಾಜು, ಸಿದ್ದಶೆಟ್ಟಿ, ಎಂ.ಸಿ. ಶ್ರೀಕಂಠಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಎಂಸಿಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಜಯರಾಮು, ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್ ಪಪಂ ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಕೆಸ್ತೂರು ಸಿದ್ಧರಾಜು, ನಟರಾಜು ಸೇರಿದಂತೆ ಅನೇಕರು ಇದ್ದರು.