ಸಂಘದ ಶಕ್ತಿಯಾಗಿ ಎಲ್ಲರೂ ನಿಲ್ಲುವಂತಾಗಲಿ

ಕೊಳ್ಳೇಗಾಲದ ಕಾವೇರಿ ರಸ್ತೆಯಲ್ಲಿರುವ ರಾಮಮಂದಿರ ಮುಂಭಾಗ ಶೋಭಾಯಾತ್ರೆಗೆ ಮುಡಿಗುಂಡ ವಿರಕ್ತ ಮಠದ ಶ್ರೀಕಂಠ ಸ್ವಾಮೀಜಿ ಚಾಲನೆ ನೀಡಿದರು. ರಮೇಶ್ ಮೂರಾರಿ, ಅಚ್ಗಾಳ್ ನಾಗರಾಜಯ್ಯ, ಸ್ವಾಮಿ ಮರಳಾಪುರ, ಎಸ್.ಬಾಲರಾಜು, ರಾಘವನ್ ಇತರರು ಇದ್ದರು.
ಕೊಳ್ಳೇಗಾಲದ ಕಾವೇರಿ ರಸ್ತೆಯಲ್ಲಿರುವ ರಾಮಮಂದಿರ ಮುಂಭಾಗ ಶೋಭಾಯಾತ್ರೆಗೆ ಮುಡಿಗುಂಡ ವಿರಕ್ತ ಮಠದ ಶ್ರೀಕಂಠ ಸ್ವಾಮೀಜಿ ಚಾಲನೆ ನೀಡಿದರು. ರಮೇಶ್ ಮೂರಾರಿ, ಅಚ್ಗಾಳ್ ನಾಗರಾಜಯ್ಯ, ಸ್ವಾಮಿ ಮರಳಾಪುರ, ಎಸ್.ಬಾಲರಾಜು, ರಾಘವನ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮೀಜಿ ಅಭಿಮತ
ಕೊಳ್ಳೇಗಾಲ: ಪಟ್ಟಣದಲ್ಲಿ ಶನಿವಾರ ಹಿಂದೂ ಸಮಾಜೋತ್ಸವ ಸಮಿತಿಯಿಂದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ಅದ್ಧೂರಿಯಾಗಿ ನಡೆಯಿತು.
ಪಟ್ಟಣದ ಕಾವೇರಿ ರಸ್ತೆಯ ರಾಮಮಂದಿರ ಮುಂಭಾಗದಲ್ಲಿ ಅಲಂಕೃತ ತೆರೆದ ವಾಹನದಲ್ಲಿ ಇರಿಸಲಾಗಿದ್ದ ಭಾರತಾಂಬೆ ಭಾವಚಿತ್ರಕ್ಕೆ ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮೀಜಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯ, ಡೊಳ್ಳು ಕುಣಿತ, ಕಂಸಾಳೆ ಕುಣಿತ, ವೀರಗಾಸೆ ಕುಣಿತ ಸಮೇತ ನೂರಾರು ಮಹಿಳೆಯರು ಕಳಸ ಹಿಡಿದು ಸಾಗಿದರು. ಈ ವೇಳೆ ಹಿಂದೂ ಕಾರ್ಯಕರ್ತರು ಭಾರತ ಮಾತೆಗೆ ಜೈಕಾರ ಮೊಳಗಿಸಿದರು. ಅಂತಿಮವಾಗಿ ಮೆರವಣಿಗೆ ಚೌಡೇಶ್ವರಿ ಕಲ್ಯಾಣ ಮಂಟಪ ತಲುಪಿತು. ಮೆರವಣಿಗೆಯಲ್ಲಿ ಮಾಜಿ ಶಾಸಕ ಎಸ್. ಬಾಲರಾಜು, ವೀರಾಂಜನೇಯ ಸ್ವಾಮಿ ದೇವಾಲಯ ಅರ್ಚಕ ರಾಘವನ್, ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಸದಸ್ಯರು, ವಿವಿಧ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.
ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮೀಜಿ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗೆ 100 ವರ್ಷ ತುಂಬಿದೆ. ಹಾಗಾಗಿ ದೇಶಾದ್ಯಂತ ರಾಷ್ಟ್ರೀಯ ಸೇವಾ ಸಂಸ್ಥೆ ಮಾಡಿರುವ ಸೇವಾ ಕಾರ್ಯಗಳ ಸ್ಮರಣೆ ತಿಳಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಭಾರತದ ಮೇಲೆ ಸಾಕಷ್ಟು ದಾಳಿಗಳಾದರೂ ದೇಶ ಸದೃಢವಾಗಿದೆ. ಸಾಕಷ್ಟು ಸಮಾಜಘಾತುಕ ಶಕ್ತಿಗಳು ಕೆಲಸ ಮಾಡಿದರೂ ಭಾರತವನ್ನು ಏನನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ವಲಸಿಗರ ಸಮಸ್ಯೆ, ಆರ್ಥಿಕ ಹೊಡೆತ ನೀಡುವುದು ನಮ್ಮ ಮುಂದಿದೆ. ಇವೆಲ್ಲವೂ ನಿಗ್ರಹವಾಗಬೇಕೆಂದರೆ ಸಂಘದ ಶಕ್ತಿಯಾಗಿ ನಾವೆಲ್ಲರೂ ನಿಲ್ಲಬೇಕು. ನಾವೆಲ್ಲರೂ ಒಂದು ಎಂದು ನಿಲ್ಲಬೇಕು ಎಂದರು.
ದಿಕ್ಸೂಚಿ ಭಾಷಣ ಮಾಡಿದ ಸ್ವಯಂ ಸೇವಕ, ವಕೀಲ ಸ್ವಾಮಿ ಮರಳಾಪುರ, ರಾಷ್ಟ್ರೀಯ ಸೇವಾ ಸಂಸ್ಥೆ 100 ವರ್ಷ ಪೂರ್ಣ ಗೊಳಿಸಿರುವುದು ಸಾಮಾನ್ಯ ಸಂಗತಿಯಲ್ಲ. ಜಗ್ಗತಿನ 55 ದೇಶಗಳಲ್ಲಿ 42 ಅಖಿಲ ಭಾರತೀಯ ಸಂಘಟನೆಗಳು 7 ಲಕ್ಷಕ್ಕೂ ಹೆಚ್ಚು ಸೇವಾ ಕಾರ್ಯಗಳನ್ನು ಮಾಡುತ್ತಿವೆ. ನೂರು ವರ್ಷದಿಂದ ಭಾರತ ಜಗದ್ಗುರು ಆಗಬೇಕೆಂಬ ಉದ್ದೇಶದಿಂದ ಸದೃಢ ರಾಷ್ಟ್ರ ನಿರ್ಮಾಣಕ್ಕೆ ರಾಷ್ಟ್ರೀಯ ಸೇವಾ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಅಚ್ಗಾಲ್ ನಾಗರಾಜಯ್ಯ, ಹಿಂದೂ ಸಮಾಜೋತ್ಸವ ಆಯೋಜನ ಸಮಿತಿ ಅಧ್ಯಕ್ಷ ರಮೇಶ್ ಮರೂರಿ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net