ಗಣಿತ ಕಲಿಕಾ ಆಂದೋಲನ ಜಿಲ್ಲಾಮಟ್ಟದ ಗಣಿತ ವಿಚಾರ ಸಂಕಿರಣ

 ಚಾಮರಾಜನಗರದ ಜಿಲ್ಲಾ ಡಯಟ್ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಅಕ್ಷರ ಫೌಂಡೇಶನ್ ವತಿಯಿಂದ ಬುಧವಾರ ಆಯೋಜಿಸಿದ್ದ ಗಣಿತ ಕಲಿಕಾ ಆಂದೋಲನ ಜಿಲ್ಲಾಮಟ್ಟದ ಗಣಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಕ್ಲಸ್ಟರ್ ಸಿಆರ್‌ಪಿಗಳು ಹಾಗೂ ಮುಖ್ಯಶಿಕ್ಷಕರನ್ನು ಸನ್ಮಾನಿಸಲಾಯಿತು. ವಿ.ನಾಗರಾಜು, ಚಂದ್ರಪಾಟೀಲ್, ರಂಗನಾಥ್, ಅರಸ್ ಶೆಟ್ಟಿ ಇತರರು ಹಾಜರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಾಲಾ ಹಂತದ ಗಣಿತ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ 25 ಕ್ಲಸ್ಟರ್ ಸಿಆರ್‌ಪಿಗಳು ಹಾಗೂ ಮುಖ್ಯಶಿಕ್ಷಕರಿಗೆ ಸನ್ಮಾನ
  • ಅಕ್ಷರ ಫೌಂಡೇಶನ್ ವತಿಯಿಂದ ವಿಚಾರ ಸಂಕಿರಣ
ಚಾಮರಾಜನಗರ: ಗಣಿತದ ಕಿಟ್‌ಗಳನ್ನು ಶಿಕ್ಷಕರು ಬಳಕೆ ಮಾಡಿಕೊಂಡು ಮಕ್ಕಳ ಕಲಿಕೆಯನ್ನು ಪರಿಣಾಮಕಾರಿಗೊಳಿಸಬೇಕೆಂದು ಡಯಟ್‌ನ ಪ್ರಭಾರ ಪ್ರಾಂಶುಪಾಲ ವಿ.ನಾಗರಾಜು ಹೇಳಿದರು.
ನಗರದ ಜಿಲ್ಲಾ ಡಯಟ್ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಅಕ್ಷರ ಫೌಂಡೇಶನ್ ವತಿಯಿಂದ ಬುಧವಾರ ಆಯೋಜಿಸಿದ್ದ ಗಣಿತ ಕಲಿಕಾ ಆಂದೋಲನ ಜಿಲ್ಲಾಮಟ್ಟದ ಗಣಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಶಾಲಾ ಹಂತದ ಗಣಿತ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ 25 ಕ್ಲಸ್ಟರ್ ಸಿಆರ್‌ಪಿಗಳು ಹಾಗೂ ಮುಖ್ಯಶಿಕ್ಷಕರಿಗೆ ಸನ್ಮಾನ ಮಾಡಿ ಅವರು ಮಾತನಾಡಿದರು.
ಅಕ್ಷರ ಫೌಂಡೇಶನ್ ಪ್ರಾಥಮಿಕ ಶಾಲಾ ಮಕ್ಕಳ ಶಿಕ್ಷಣದಲ್ಲಿ ಗಣಿತ ವಿಷಯ ಕಲಿಕೆಯಲ್ಲಿ ಉತ್ತಮವಾದ ಕೆಲಸವನ್ನು ಮಾಡುತ್ತಿದೆ. ಸಂಸ್ಥೆಯು ಅಭಿವೃದ್ಧಿಪಡಿಸಿರುವ ಗಣಿತದ ಕಿಟ್‌ಗಳನ್ನು ಶಿಕ್ಷಕರು, ಶಿಕ್ಷಣಾಧಿಕಾರಿಗಳು ಸರಿಯಾಗಿ ಬಳಸಿಕೊಂಡು ಮಕ್ಕಳ ಗಣಿತ ವಿಷಯಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆ(ಪ್ರೌಢಶಾಲೆ) ಉಪನಿರ್ದೇಶಕ ಚಂದ್ರಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಅಕ್ಷಯ ೌಂಡೇಶನ್‌ನ ಹಿರಿಯ ಕ್ಷೇತ್ರ ವಿಭಾಗೀಯ ವ್ಯವಸ್ಥಾಪಕ ರಂಗನಾಥ್, ಡಯಟ್ ಉಪನ್ಯಾಸಕ ಅರಸ್ ಶೆಟ್ಟಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net