ಬಕ್ರೀದ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ

ಚಾಮರಾಜನಗರ ತಾಲೂಕಿನ ಮುತ್ತಿಗೆ ಗ್ರಾಮದ ಮುಸ್ಲಿಮರು ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಚಾಮರಾಜನಗರ ತಾಲೂಕಿನ ಮುತ್ತಿಗೆ ಗ್ರಾಮದ ಮುಸ್ಲಿಮರು ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಈದ್ಗಾ ಮೈದಾನಗಳಲ್ಲಿ ಹಬ್ಬದ
  • ಬಕ್ರೀದ್ ಹಬ್ಬವು ದಾನ, ಧರ್ಮದ ಸಂಕೇತವಾಗಿದೆ
ಚಾಮರಾಜನಗರ: ಬಕ್ರೀದ್ ಹಬ್ಬದ ಪ್ರಯುಕ್ತ ನಗರದ ಈದ್ಗಾ ಮೈದಾನಗಳಲ್ಲಿ ಮುಸ್ಲಿಮರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ನಗರದ ಸತ್ತಿ ರಸ್ತೆಯಲ್ಲಿರುವ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗ, ತಾಲೂಕಿನ ಮುತ್ತಿಗೆ ಗ್ರಾಮದ ಬಳಿಯ ಈದ್ಗಾ ಮೈದಾನಗಳಲ್ಲಿ ಗುರುವಾರ ಬೆಳಗ್ಗೆ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು ಧರ್ಮಗುರುಗಳಿಂದ ಕುರಾನ್‌ನ ವಿಚಾರಗಳನ್ನು ಬೋದನೆ ಮಾಡಲಾಯಿತು. ಬಕ್ರೀದ್ ಹಬ್ಬವು ದಾನ, ಧರ್ಮದ ಸಂಕೇತವಾಗಿದೆ. ಮನಸ್ಸನ್ನು ಶುದ್ಧವಾಗಿ ಇಟ್ಟುಕೊಳ್ಳುವುದಕ್ಕೆ ದಾನ ಮಾಡಬೇಕು. ಪ್ರಚಾರವಿಲ್ಲದ ದಾನ ದೇವರನ್ನು ಒಲಿಸಿಕೊಳ್ಳಲು ಸಹಕಾರಿಯಾಗುತ್ತದೆ. ಹಾಗಾಗಿ ದೇವರ ಹೆಸರಿನಲ್ಲಿ ದಾನ ಮಾಡುಬೇಕು ಎಂಬ ಸಂದೇಶವನ್ನು ಪ್ರಾರ್ಥನೆ ಸಮಯದಲ್ಲಿ ನೀಡಲಾಯಿತು. ಬಳಿಕ ಹಬ್ಬದ ಪ್ರಯುಕ್ತ ಮನೆಗಳಲ್ಲಿ ಮಾಡಿದ್ದ ಮಾಂಸದೂಟವನ್ನು ಮಾಡಿದ ಮುಸ್ಲಿಮರು ಮನೆಗೆ ಬಂದಿದ್ದ ಸಂಬಂಧಿಕರೊಂದಿಗೆ ಸಂಭ್ರಮಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net