ಮಕ್ಕಳಿಗೆ ಶಾಲಾ ಆವರಣದಲ್ಲಿದ್ದ ತೇಗ, ನೇರಳೆ, ಚೆರ‌್ರಿ ಮುಂತಾದ ಮರಗಳ ಪ್ರಾಮುಖ್ಯತೆ ವಿವರಿಸುವುದರ ಜತೆಗೆ ಗಿಡ ಬೆಳೆಸಲು ಸಲಹೆ ನೀಡಿದರು. ಶಾಲೆ ಮುಖ್ಯಶಿಕ್ಷಕ ಎಂ.ಶ್ರೀಕಂಠಮೂರ್ತಿ ಮಾತನಾಡಿ, ಮಕ್ಕಳು ಪ್ಲಾಸ್ಟಿಕ್ ಬಳಕೆಯನ್ನು ಕೈಬಿಡಬೇಕು. ಆ ಮೂಲಕ ಜೀವನಶೈಲಿಯನ್ನು ಪರಿಸರ ಸ್ನೇಹಿಯಾಗಿ ಮಾರ್ಪಾಡು ಮಾಡಬೇಕು ಎಂದು ಸಲಹೆ ನೀಡಿದರು.