ಗಾಂಜಾ ಸಾಗಾಣೆ ಮಾಡುತ್ತಿದ್ದವನ ಬಂಧನ

ಪಟ್ಟಣದ ಕೃಷಿ ಮಾರುಕಟ್ಟೆ ಮುಂಭಾಗದ ರಸ್ತೆಯಲ್ಲಿ 320 ಗ್ರಾಂ ತೂಕದ ಒಣಗಾಂಜಾ ಸಾಗಾಣೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿ.ವಿ ವರ್ಷಾ, ತಖೀವುಲ್ಲಾ, ರವಿಕುಮಾರ್, ವೆಂಕಟೇಶ್, ಶಿವಕುಮಾರ್, ಬಿಳಿಗೌಡ  ಇತರರು ಇದ್ದಾರೆ.
ಪಟ್ಟಣದ ಕೃಷಿ ಮಾರುಕಟ್ಟೆ ಮುಂಭಾಗದ ರಸ್ತೆಯಲ್ಲಿ 320 ಗ್ರಾಂ ತೂಕದ ಒಣಗಾಂಜಾ ಸಾಗಾಣೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿ.ವಿ ವರ್ಷಾ, ತಖೀವುಲ್ಲಾ, ರವಿಕುಮಾರ್, ವೆಂಕಟೇಶ್, ಶಿವಕುಮಾರ್, ಬಿಳಿಗೌಡ ಇತರರು ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • 320 ಗ್ರಾಂ ತೂಕದ ಒಣಗಾಂಜಾ ಸಾಗಾಣೆ
ಕೊಳ್ಳೇಗಾಲ: ಪಟ್ಟಣದ ಕೃಷಿ ಮಾರುಕಟ್ಟೆ ಮುಂಭಾಗದ ರಸ್ತೆಯಲ್ಲಿ ಸೋಮವಾರ ಸಂಜೆ ಪ್ಲಾಸ್ಟಿಕ್ ಕವರ್‌ನಲ್ಲಿ 320 ಗ್ರಾಂ ತೂಕದ ಒಣಗಾಂಜಾ ಸಾಗಾಣೆ ಮಾಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಳಿಗಿರಿರಂಗನ ಬೆಟ್ಟದ ಹೊಸ ಪೋಡಿನ ನಿವಾಸಿ ಜಡೆಯ ಅಲಿಯಾಸ್ ಕೆಂಪಿ(25) ಬಂಧಿತ ಆರೋಪಿ. ಇವನು ಕೆಂಪನಪಾಳ್ಯ ಮುಖ್ಯ ರಸ್ತೆ ಸಿಗುವ ಕೃಷಿ ಮಾರುಕಟ್ಟೆ ಎದರು ರಸ್ತೆಯಲ್ಲಿ ಒಣ ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ವಿ ವರ್ಷಾ ಹಾಗೂ ಉಪವಿಭಾಗ ಅಪರಾಧ ದಳದ ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಗಾಂಜಾ ಸಮೇತ ಬಂಧಿಸಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಎಸ್‌ಐ ತಖೀವುಲ್ಲಾ, ಹೆಡ್ ಕಾನ್ಸ್ ಟೇಬಲ್ ರವಿಕುಮಾರ್, ವೆಂಕಟೇಶ್, ಕಾನ್ಸ್‌ಟೇಬಲ್ ಶಿವಕುಮಾರ್, ಬಿಳಿಗೌಡ, ಪಟ್ಟಣ ಪೊಲೀಸ್ ಠಾಣೆಯ ಅನಿಲ್ ಕುಮಾರ್, ಮಂಜು ಇದ್ದರು. ಕಳೆದ ಎರಡು ತಿಂಗಳಿನಿಂದ ಕೊಳ್ಳೇಗಾಲ ಉಪವಿಭಾಗ ( ಡಿವೈಎಸ್ಪಿ) ಅಪರಾಧ ದಳದ ಸಿಬ್ಬಂದಿ ಕೊಳ್ಳೇಗಾಲ ಉಪವಿಭಾಗದ ವಿವಿಧ ಠಾಣೆಯ ವ್ಯಾಪ್ತಿಯಲ್ಲಿ 5 ಒಣ ಗಾಂಜಾ ಸಾಗಣೆ ಪ್ರಕರಣವನ್ನು ಭೇದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net