ಗುಂಡಿ ಮುಚ್ಚುವ ಮೂಲಕ ಅನುಕೂಲ ಕಲ್ಪಿಸಿ

ಲೊಕ್ಕನಹಳ್ಳಿ ಮಾರ್ಗದ ಹುಬ್ಬೆಹುಣಸೆ ಕೆರೆ ಬಳಿಯ ರಸ್ತೆಯಲ್ಲಿ ನಿರ್ಮಾಣವಾಗಿರುವ ಗುಂಡಿ.
ಲೊಕ್ಕನಹಳ್ಳಿ ಮಾರ್ಗದ ಹುಬ್ಬೆಹುಣಸೆ ಕೆರೆ ಬಳಿಯ ರಸ್ತೆಯಲ್ಲಿ ನಿರ್ಮಾಣವಾಗಿರುವ ಗುಂಡಿ.
Published on
ಹನೂರು: ಪಟ್ಟಣದಿಂದ ಲೊಕ್ಕನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆಯ ಹುಬ್ಬೆಹುಣಸೆ ಕೆರೆ ಬಳಿ ನಿರ್ಮಾಣವಾಗಿರುವ ಗುಂಡಿಯನ್ನು ಮುಚ್ಚಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಮಾರ್ಗವು ಲೊಕ್ಕನಹಳ್ಳಿ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಈ ಮಾರ್ಗದಲ್ಲಿ ಕಳೆದ ಐದಾರು ತಿಂಗಳ ಹಿಂದೆ ಬಾಯ್ತೆರೆದಿದ್ದ ಗುಂಡಿಗಳಿಗೆ ಪಿಡಬ್ಲ್ಯುಡಿ ಇಲಾಖೆ ತೇಪೆ ಹಾಕುವ ಮೂಲಕ ಸಂಚಾರಕ್ಕೆ ಅನುಕೂಲ ಕಲ್ಪಿಸಿತ್ತು. ಆದರೆ ಮೂರು ದಿನಗಳಿಂದ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಹುಬ್ಬೆಹುಣಸೆ ಕೆರೆಯ ಸಮೀಪದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಡಾಂಬರು ಸಂಪೂರ್ಣ ಕಿತ್ತು ಬಂದಿದೆ. ಇದರಿಂದ ನೀರು ನಿಲ್ಲುವಂತಾಗಿದೆ. ಪರಿಣಾಮ ವಾಹನ ಸಂಚಾರಕ್ಕೆ ಅದರಲ್ಲೂ ಬೈಕ್ ಸವಾರರು ಸಂಚರಿಸಲು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಗುಂಡಿಯನ್ನು ಮುಚ್ಚಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಲೊಕ್ಕನಹಳ್ಳಿ ಗ್ರಾಮದ ಜಗದೀಶ್ ಒತ್ತಾಯಿಸಿದ್ದಾರೆ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net