ಯೋಜನೆಯಡಿ ಕೆರೆ-ಕಟ್ಟೆ, ಕಾಲುವೆ, ಕುಡಿಯುವ ನೀರು, ಮನೆ ನಿರ್ಮಾಣಕ್ಕೆ ನೆರವು, ಜಲ ಸಂರಕ್ಷಣೆ, ಚೆಕ್ ಡ್ಯಾಂ ನಿರ್ಮಾಣ, ಕೊಳವೆ ಪುನಃಶ್ಚೇತನ, ಸಿ.ಸಿ ರಸ್ತೆ, ಅಂಗನವಾಡಿ ಕಟ್ಟಡ ದುರಸ್ಥಿ, ಪಂಚಾಯತ್ ರಾಜ್ ಕಟ್ಟಡ ದುರಸ್ಥಿ ಮತ್ತು ನಿರ್ವಹಣೆ, ಅಡುಗೆ ಕೋಣೆ, ಆಟದ ಮೈದಾನ, ಶಾಲಾ ಶೌಚಾಲಯ, ಸ್ವ ಸಹಾಯ ಸಂಘದ ಕಟ್ಟಡ ನಿರ್ಮಾಣ ಮತ್ತು ಗೋದಾಮು ನಿರ್ಮಾಣ ಇನ್ನಿತರೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಯೋಜನೆಯ ಬದಲಾವಣೆಯಿಂದ ಕೂಲಿಕಾರರು ಉದ್ಯೋಗದಿಂದ ವಂಚಿತರಾಗುವುದಿಲ್ಲ. ಎಲ್ಲಾ ಅರ್ಹರಿಗೆ ನಿರಂತರ ಕೆಲಸ ದೊರೆಯಲಿದೆ ಎಂದು ಸಂದೇಶ ಅವರು ತಿಳಿಸಿದರು.