ಸಂಘರ್ಷದ ಬದಲಾಗಿ ಸಹಕಾರ, ಒಮ್ಮತದ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಅದಾಲತ್ ಉತ್ತಮ ವೇದಿಕೆಯಾಗಿದೆ. ಇದರಿಂದ ಕಕ್ಷಿದಾರರ ಅಮೂಲ್ಯ ಸಮಯ, ಸಂಪನ್ಮೂಲ ಉಳಿತಾಯವಾಗಿ ಮಾನಸಿಕ ಒತ್ತಡವು ಕಡಿಮೆಯಾಗಲಿದೆ. ಪ್ರಕರಣಗಳ ಅನಿಶ್ವಿತತೆ ದೂರಮಾಡಿ ಉಭಯ ಪಕ್ಷಾಕಾರರಕಲ್ಲಿ ಭಾಂಧವ್ಯ ವೃದ್ಧಿಸಲಿದೆ. ನ್ಯಾಯ ಎಂದರೆ ನ್ಯಾಯಲಯಗಳಲ್ಲಿ ನೀಡುವ ತೀರ್ಪು ಮಾತ್ರವಲ್ಲ, ಬದಲಾಗಿ ಪರಸ್ಪರ ಗೌರವ, ತಿಳಿವಳಿಕೆಯಿಂದ ಬಗೆಹರಿಸುವುದು ಸಹ ನ್ಯಾಯವೇ ಆಗಿದೆ. ಪರ್ಯಾಯ ಇತ್ಯರ್ಥ ವಿಧಾನಗಳನ್ನು ಬಲಪಡಿಸಿ ಸಾಮರಸ್ಯದ ಸಂಸ್ಕೃತಿ ಬೆಳೆಸಲು ನಾವೆಲ್ಲರೂ ಸಂಕಲ್ಪ ಮಾಡೋಣ ಎಂದು ತಿಳಿಸಿದರು.