ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ

ಪ್ರಗತಿಯಲ್ಲಿರುವ ಹನೂರು ತಾಲೂಕಿನ ಬಂಡಳ್ಳಿ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಪರಿಶಿಲಿಸಿದರು. ಮಂಜೇಶ್, ಮಹದೇವ, ವಿಜಯಕುಮಾರ್, ಜಸ್ಸಿಂಪಾಷ ಇತರರಿದ್ದರು.
ಪ್ರಗತಿಯಲ್ಲಿರುವ ಹನೂರು ತಾಲೂಕಿನ ಬಂಡಳ್ಳಿ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಪರಿಶಿಲಿಸಿದರು. ಮಂಜೇಶ್, ಮಹದೇವ, ವಿಜಯಕುಮಾರ್, ಜಸ್ಸಿಂಪಾಷ ಇತರರಿದ್ದರು.
Published on

ಅಧಿಕಾರಿಗಳಿಗೆ ಶಾಸಕ ಎಂ.ಆರ್.ಮಂಜುನಾಥ್ ಸೂಚನೆ

ಹನೂರು: ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಮೂಲಕ ಶೀಘ್ರ ಪೂರ್ಣಗೊಳಿಸುವಂತೆ ಶಾಸಕ ಎಂ.ಆರ್. ಮಂಜುನಾಥ್ ಸೂಚಿಸಿದರು.
ಚಂಗವಾಡಿಯ ಬಳಿ ಪ್ರಗತಿಯಲ್ಲಿರುವ ಬಂಡಳ್ಳಿ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಯ ಸ್ಥಳಕ್ಕೆ ಬುಧವಾರ ತೆರಳಿ ಪರಿಶೀಲಿಸಿ ಮಾತನಾಡಿದ ಅವರು, ಈ ಮಾರ್ಗದ ರಸ್ತೆಯು ಹಲವು ವರ್ಷಗಳಿಂದ ಹದಗೆಟ್ಟಿತ್ತು. ಇದರಿಂದ ಈ ಭಾಗದ ಜನರು ಸಂಚರಿಸಲು ತುಂಬ ತೊಂದರೆ ಎದುರಿಸುತ್ತಿದ್ದರು. ರಸ್ತೆ ಹಾಳಾಗಿದ್ದ ಕಾರಣ ಅಪಘಾತಗಳು ಸಂಭವಿಸುತ್ತಿತ್ತು. ರಸ್ತೆ ಅಭಿವೃದ್ಧಿಪಡಿಸಬೇಕು ಎನ್ನುವುದು ಈ ಭಾಗದ ಜನರು ಹಲವು ವರ್ಷಗಳ ಬೇಡಿಕೆ. ಇದನ್ನು ಮನಗಂಡು ರಸ್ತೆ ಅಭಿವೃದ್ಧಿ ಅಗತ್ಯ ಕ್ರಮವಹಿಸಲಾಗಿತ್ತು. ಆದ್ದರಿಂದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಅಗತ್ಯವಿರುವೆಡೆ ಸೂಚನಾ ಫಲಕಗಳನ್ನು ಅಳವಡಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಸಂಬಂಧಪಟ್ಟವರಿಗೆ ಸೂಚಿಸಿದರು.
ಪಿಎಸಿಸಿ ನಿರ್ದೇಶಕ ಮಂಜೇಶ್, ಮುಖಂಡರಾದ ಮಹದೇವ, ಜಸ್ಸಿಂಪಾಷ, ವಿಜಯಕುಮಾರ್, ನಟರಾಜು ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net