ತೆರಕಣಾಂಬಿ ಪೊಲೀಸರಿಂದ ಲಾಕ್ಡ್‌ಹೌಸ್ ಬೀಟ್ ಸಿಸ್ಟಂ

 ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಪೊಲೀಸರು ಲಾಕ್ಡ್‌ಹೌಸ್ ಬೀಟ್ ಸಿಸ್ಟಂ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಪೊಲೀಸರು ಲಾಕ್ಡ್‌ಹೌಸ್ ಬೀಟ್ ಸಿಸ್ಟಂ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • Terakanambi Police
ಗುಂಡ್ಲುಪೇಟೆ: ತಮ್ಮ ಮನೆಗಳಿಂದ ಕೆಲವು ದಿನಗಳ ಕಾಲ ಹೊರ ಹೋಗುವ ತಾಲೂಕಿನ ನಿವಾಸಿಗಳು ಲಾಕ್ಡ್‌ಹೌಸ್ ಬೀಟ್ ಸಿಸ್ಟಂಗೆ ವಾಟ್ಸ್‌ಆ್ಯಪ್ ಸಂದೇಶ ನೀಡುವ ಮೂಲಕ ತಮ್ಮ ಮನೆಗಳಿಗೆ ಪೊಲೀಸ್ ರಕ್ಷಣೆ ಪಡೆದುಕೊಳ್ಳುವ ಸೌಲಭ್ಯವನ್ನು ತಾಲೂಕಿನ ತೆರಕಣಾಂಬಿ ಪೊಲೀಸ್ ಠಾಣೆ ಜಾರಿಗೆ ತಂದಿದೆ.
ಇತ್ತೀಚೆಗೆ ದುಷ್ಕರ್ಮಿಗಳು ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಯಾರೂ ಇಲ್ಲದಿರುವ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ತನ್ನ ವ್ಯಾಪ್ತಿಯ ನಿವಾಸಿಗಳಿಗೆ ಲಾಕ್ಡ್‌ಹೌಸ್ ಬೀಟ್ ಸಿಸ್ಟಂ ಯೋಜನೆಯನ್ನು ಪರಿಚಯಿಸಿದೆ.
ಈ ಯೋಜನೆಯಲ್ಲಿ ಪ್ರವಾಸ ಮುಂತಾದ ಕಾರಣದಿಂದ ಮನೆಗಳಿಗೆ ಬೀಗ ಹಾಕಿ ಹೊರಗೆ ತೆರಳುವ ನಿವಾಸಿಗಳು ಹತ್ತಿರ ಪೊಲೀಸ್ ಠಾಣೆ ಮಾಹಿತಿ ನೀಡುವ ಇಲ್ಲವೇ 8277957420 ಸಂಖ್ಯೆಗೆ ಸೆಲ್ಫಿ ತೆಗೆದ ಫೋಟೋ ಹಾಗೂ ಲೊಕೇಶನ್ ಅನ್ನು ವಾಟ್ಸ್‌ಆ್ಯಪ್ ಮಾಡುವ ಮೂಲಕ ನೋಂದಾಯಿಸಬಹುದು. ಇಂಥಾ ಮನೆಗಳ ಮೇಲೆ ಪೊಲೀಸರು ಕಣ್ಗಾವಲು ಇಡುವ ಮೂಲಕ ಕಳ್ಳಕಾಕರಿಂದ ರಕ್ಷಣೆ ಒದಗಿಸಲಾಗುತ್ತದೆ.
ಈ ಬಗ್ಗೆ ತೆರಕಣಾಂಬಿ ಪೊಲೀಸರು ತಮ್ಮ ವ್ಯಾಪ್ತಿಯ ಗ್ರಾಮಗಳ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್, ಬ್ಯಾನರ್ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net